ಸೋಮವಾರ, 24 ನವೆಂಬರ್ 2025
×
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: 25 ನವೆಂಬರ್ 2025 ಮಂಗಳವಾರ– ಮಧುರ ಖಾದ್ಯಗಳ ಭೋಜನ ನಿಮ್ಮದಾಗುವುದು
Published 24 ನವೆಂಬರ್ 2025, 18:31 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಸಮಸ್ಯೆಗಳನ್ನು ಸೌಹಾರ್ದಯುತವಾಗಿ ಮತ್ತು ನ್ಯಾಯಸಮ್ಮತವಾಗಿ ಬಗೆಹರಿಸಿಕೊಳ್ಳುವಲ್ಲಿ ಯಶಸ್ವಿಯಾಗುವಿರಿ. ಬುದ್ಧಿವಂತಿಕೆಯನಡೆ-ನುಡಿಯಿಂದ ಎಲ್ಲ ಸಮಸ್ಯೆಗಳು ಹಿಮದಂತೆ ಕರಗಲಿವೆ.
ವೃಷಭ
ಸ್ವಯಂಕೃತ ಅಪರಾಧದ ಬಗ್ಗೆ ಎಚ್ಚರವಿರಲಿ. ಸರಿ ತಪ್ಪುಗಳ ನಿರ್ಣಯವು ಕಷ್ಟಕರ ಎನಿಸುವುದು. ಪರಿಶ್ರಮದಿಂದ ಬಹುದಿನಗಳ ಅಥವಾ ಹಿರಿಯರ ಕನಸು ನನಸಾಗಿಸುವಿರಿ. ಉತ್ತಮ ಸಂಗೀತ ಕೇಳಿ.
ಮಿಥುನ
ವರಿಷ್ಠ ಅಧಿಕಾರಿಗಳಿಗೆ ವಿಶೇಷ ಸ್ಥಾನಮಾನ, ಅಧಿಕಾರಗಳು ಪ್ರಾಪ್ತವಾಗಲಿವೆ. ಮಳೆಯ ಕಾರಣದಿಂದ ಮನೆಯ ದುರಸ್ತಿಯ ಕೆಲಸಗಳನ್ನು ಮಾಡಿಸುವ ಅನಿವಾರ್ಯ ಬರಲಿದೆ.
ಕರ್ಕಾಟಕ
ಸುತ್ತಮುತ್ತದ ವಾತಾವರಣವು ಶಾಂತಿ ಕೆಡಿಸುವ ಕೆಲಸವನ್ನು ಮಾಡುವುದು. ಅನಾರೋಗ್ಯದ ಸಮಯದಲ್ಲೂ ಲವಲವಿಕೆಯ ಓಡಾಟ ಇತರರ ಅಸೂಯೆಗೆ ಕಾರಣವಾಗುತ್ತದೆ.
ಸಿಂಹ
ಮಾತುಗಳಿಂದ ಬಹುಜನರಲ್ಲಿ ನಿಷ್ಠುರ ಮಾಡಿಕೊಂಡಿರುವ ವಿಶ್ವಾಸ ಪುನಃ ಸಂಪಾದಿಸಬೇಕಾಗುವುದು. ತಾಂತ್ರಿಕ ಕ್ಷೇತ್ರದಲ್ಲಿನ ಸಾಧನೆಗಾಗಿ ಕೆಲವರಿಗೆ ಪ್ರಶಸ್ತಿ ಲಭಿಸುವಂತೆ ಆಗುವುದು.
ಕನ್ಯಾ
ವಿದ್ಯಾರ್ಜನೆ ಎಂಬ ಹೆಸರಿನಲ್ಲಿ ಕುಟುಂಬಕ್ಕೆ ಹೊರೆಯಾಗುವ ರೀತಿ ಯಲ್ಲಿ ನಡೆದುಕೊಳ್ಳುವುದು ಎಷ್ಟರ ಮಟ್ಟಿಗೆ ಸರಿ ಎಂಬುದನ್ನು ಪರಾಮರ್ಶಿಸಿ. ಉತ್ಸಾಹದಿಂದ ಕೆಲಸ ಆರಂಭಿಸಿದರೆ ಸಮಸ್ಯೆಗಳು ಪರಿಹಾರಗೊಳ್ಳಲಿವೆ.
ತುಲಾ
ಕೆಲಸದ ಒತ್ತಡದಿಂದ ದೂರಾಗಿ ಮಿತ್ರರೊಡನೆ ಉಲ್ಲಾಸದಿಂದ ಕಾಲ ಕಳೆಯುವಿರಿ. ರಂಗಿನ ಲೋಕದ ಕನಸನ್ನು ನನಸು ಮಾಡಿಕೊಳ್ಳುವ ಭರದಲ್ಲಿ ಹಣವನ್ನು ಹಾಳು ಮಾಡಿಕೊಳ್ಳದಿರಿ. ತಂಗಿಯ ದುಃಖಕ್ಕೆ ಹೆಗಲಾಗಿ ನಿಲ್ಲುವಿರಿ.
ವೃಶ್ಚಿಕ
ಏನನ್ನಾದರೂ ಸಾಧಿಸಲೇಬೇಕು ಎಂಬ ಆಸೆ-ಆಕಾಂಕ್ಷೆಗೆ ಆತ್ಮವಿಶ್ವಾಸದ ಕೊರತೆಯಂತೂ ಕಾಣಿಸದು. ಅರಣ್ಯದಲ್ಲಿ ಕಾರ್ಯದ ನಿಮಿತ್ತ ಸಂಚರಿಸುವವರಿಗೆ ವಿಷಜಂತುಗಳ ಕಾಟ ಇರಬಹುದು.
ಧನು
ತಂತಿವಾದಕರ ಹೊಸ ರೀತಿಯ ಪ್ರಯೋಗವು ಸಂಗೀತ ರಸಿಕರ ಮನಸೂರೆಗೊಳಿಸುತ್ತದೆ. ಯೋಜನೆಗಳು ಕಾರ್ಯಗತಗೊಳ್ಳಲು ಪ್ರಯತ್ನ ನಡೆಸಬೇಕಾಗುವುದು. ಉದ್ರೇಕಕ್ಕೆ ಒಳಗಾಗದೆ ಕೆಲಸವನ್ನು ಮಾಡಿ.
ಮಕರ
ಸಂಜೆಯ ಸಮಯದಲ್ಲಿ ಆರಾಮವಾಗಿ ಪ್ರಕೃತಿಯ ಸೌಂದರ್ಯ ಅನುಭವಿಸುವಿರಿ. ಕರ್ತವ್ಯದ ಕೊರತೆಯು ಮೇಲಧಿಕಾರಿಗೆ ಎದ್ದು ಕಾಣಲಿದೆ. ಮಗನಿಗೆ ಉದ್ಯೋಗ ದೊರೆತು ಸಂತೋಷವಾಗುತ್ತದೆ.
ಕುಂಭ
ಅಪರೂಪದ ಅಳಿವಿನಂಚಿನಲ್ಲಿರುವ ಕಲಿತ ವಿದ್ಯೆಯ ಬಗ್ಗೆ ಸಂದರ್ಶನವನ್ನು ಕೊಡುವಂತೆ ಪತ್ರಿಕೆ ಅಥವಾ ದೂರದರ್ಶನ ಮಾಧ್ಯಮದವರು ನಿಮ್ಮಲ್ಲಿಗೆ ಬರುವರು. ಸಂಬಂಧಗಳು ಗಟ್ಟಿಗೊಳ್ಳಲಿವೆ.
ಮೀನ
ನ್ಯಾಯಾಲಯದಲ್ಲಿರುವ ಪ್ರಕರಣಗಳು ವಿರುದ್ಧವಾಗಿ ತಿರುಗುವಂತೆ ಷಡ್ಯಂತ್ರ ನಡೆಯಬಹುದು. ಜವಾಬ್ದಾರಿಯನ್ನು ಅಪ್ಪಿ ತಪ್ಪಿಯು ಬೇರೆಯವರಿಗೆ ಒಪ್ಪಿಸದಿರಿ. ಮಧುರ ಖಾದ್ಯಗಳ ಭೋಜನ ನಿಮ್ಮದಾಗುವುದು.
ADVERTISEMENT
ADVERTISEMENT