ಬೆಂಗಳೂರು: ಕರ್ನಾಟಕದ ಶಟ್ಲರ್ಗಳಾದ ಶೈನಾ ಮಣಿಮುತ್ತು ಮತ್ತು ಸುಮಿತ್ ಎ.ಆರ್. ಅವರು ಅರುಣಾಚಲ ಪ್ರದೇಶದ ಇಟಾನಗರದಲ್ಲಿ ಸೋಮವಾರ ಮುಕ್ತಾಯಗೊಂಡ 48ನೇ ಜೂನಿಯರ್ ರಾಷ್ಟ್ರೀಯ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್ನಲ್ಲಿ ಕ್ರಮವಾಗಿ ಬಾಲಕಿಯರ ಸಿಂಗಲ್ಸ್ ಮತ್ತು ಬಾಲಕರ ಡಬಲ್ಸ್ ಪ್ರಶಸ್ತಿ ಗೆದ್ದುಕೊಂಡರು.

ಜೂನಿಯರ್ ಬಾಲಕಿಯರ ಸಿಂಗಲ್ಸ್ ಫೈನಲ್ನಲ್ಲಿ ಶೈನಾ 17–21,22–20, 21–13 ರಿಂದ ತನೂ ಚಂದ್ರ ಅವರನ್ನು ಸೋಲಿಸಿದರು. ಕರ್ನಾಟಕದ ರುಜುಲಾ ರಾಮು ಸೆಮಿಫೈನಲ್ವರೆಗೆ ತಲುಪಿದ್ದರು.

ಸುಮಿತ್ ಬಾಲಕರ ಡಬಲ್ಸ್ನಲ್ಲಿ ಜೊತೆಗೂಡಿ ಲಾಲ್ರೆಮ್ಸಂಘಾ ಜೊತೆಗೂಡಿ ಫೈನಲ್ನಲ್ಲಿ 21–13, 21–12 ರಿಂದ ಭಾರ್ಗವ್ ರಾಮ್ ಅರಿಗಲೆ (ಆಂಧ್ರ)– ವಿಶ್ವತೇಜ್ ಗೊಬ್ಬುರು (ಆಂಧ್ರ ಪ್ರದೇಶ) ಅವರನ್ನು ಪರಾಭವಗೊಳಿಸಿದರು.

ಬಾಲಕರ ಸಿಂಗಲ್ಸ್ ಪ್ರಶಸ್ತಿ ಉತ್ತರಾಖಂಡದ ಅನ್ಶ್ ನೇಗಿ ಪಾಲಾಯಿತು. ಅವರು ಫೈನಲ್ನಲ್ಲಿ 18–21, 22–20, 21–11 ರಿಂದ ತಮ್ಮದೇ ರಾಜ್ಯದ ಸುರ್ಯಾಕ್ಷ್ ರಾವತ್ ಅವರನ್ನು ಸೋಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.