ಗುವಾಹಟಿ: ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಎರಡನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದ ಮೂರನೇ ದಿನದಾಟದ ಟೀ ವಿರಾಮದ ಹೊತ್ತಿಗೆ ಟೀಮ್ ಇಂಡಿಯಾ 36 ಓವರ್ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 102 ರನ್ ಗಳಿಸಿದ್ದು, ಸಂಕಷ್ಟದಲ್ಲಿದೆ.

ಆತಿಥೇಯರು 387 ರನ್ ಹಿನ್ನಡೆಯಲ್ಲಿದೆ. ಅಲ್ಲದೆ ಫಾಲೋ ಆನ್ ತಪ್ಪಿಸಿಕೊಳ್ಳಲು ಇನ್ನೂ 187 ರನ್ ಬೇಕಿದೆ.

ಇಂದಿನ ದಿನದಾಟದಲ್ಲಿ ಯಶಸ್ವಿ ಜೈಸ್ವಾಲ್ ಅರ್ಧಶತಕ ಗಳಿಸಿದನ್ನು ಹೊರತುಪಡಿಸಿದರೆ ಬೇರೆ ಯಾವ ಬ್ಯಾಟರ್ಗಳಿಂದ ಹೋರಾಟದ ಮನೋಭಾವ ಕಂಡುಬಂದಿಲ್ಲ.

ಜೈಸ್ವಾಲ್ 97 ಎಸೆತಗಳಲ್ಲಿ 58 ರನ್ (7 ಬೌಂಡರಿ, 1 ಸಿಕ್ಸರ್) ಗಳಿಸಿ ಔಟ್ ಆದರು. ಕೆ.ಎಲ್. ರಾಹುಲ್ 22, ಸಾಯಿ ಸುದರ್ಶನ್ 15 ಹಾಗೂ ಧ್ರುವ್ ಜುರೇಲ್ ಶೂನ್ಯಕ್ಕೆ ಔಟ್ ಆಗಿ ನಿರಾಸೆ ಮೂಡಿಸಿದರು.

ನಾಯಕ ರಿಷಭ್ ಪಂತ್ ಕ್ರೀಸಿನಲ್ಲಿದ್ದು (6*), ರವೀಂದ್ರ ಜಡೇಜ (0*) ಸಾಥ್ ನೀಡುತ್ತಿದ್ದಾರೆ.

ದಕ್ಷಿಣ ಆಫ್ರಿಕಾದ ಪರ ಶಿಮೊನ್ ಹರ್ಮರ್ ಎರಡು ಮತ್ತು ಮಾರ್ಕೊ ಯಾನ್ಸೆನ್ ಹಾಗೂ ಕೇಶವ್ ಮಹಾರಾಜ್ ತಲಾ ಒಂದು ವಿಕೆಟ್ ಗಳಿಸಿದ್ದಾರೆ.

ಸೆನುರನ್ ಮುತ್ತುಸಾಮಿ ಅಮೋಘ ಶತಕ (109) ಹಾಗೂ ಮಾರ್ಕೊ ಯಾನ್ಸೆನ್ ಅರ್ಧಶತಕದ (93) ಬೆಂಬಲದಿಂದ ದಕ್ಷಿಣ ಆಫ್ರಿಕಾ ಮೊದಲ ಇನಿಂಗ್ಸ್ನಲ್ಲಿ 489 ರನ್ ಪೇರಿಸಿತ್ತು.

ಕೋಲ್ಕತ್ತದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಹೀನಾಯ ಸೋಲು ಅನುಭವಿಸಿದ್ದ ಟೀಮ್ ಇಂಡಿಯಾ, ಸರಣಿ ಸಮಬಲಗೊಳಿಸಲು ಈ ಪಂದ್ಯದಲ್ಲಿ ಗೆಲ್ಲಲೇ ಬೇಕಾದ ಒತ್ತಡಕ್ಕೆ ಸಿಲುಕಿದೆ. ಗಾಯಾಳು ಶುಭಮನ್ ಗಿಲ್ ಅನುಪಸ್ಥಿತಿಯಲ್ಲಿ ಭಾರತ ತಂಡವನ್ನು ರಿಷಬ್ ಪಂತ್ ಮುನ್ನಡೆಸುತ್ತಿದ್ದಾರೆ.
.ಟೆಸ್ಟ್: ಭಾರತದ ಬೌಲರ್ಗಳಿಗೆ ಬಿಸಿ ಮುಟ್ಟಿಸಿದ SA ಬ್ಯಾಟರ್ಗಳು- ಮಾರ್ಕೊ ಅಬ್ಬರ.ಅಂಧ ಮಹಿಳೆಯರ ಟಿ20 ವಿಶ್ವಕಪ್: ಹೀಯಾಳಿಸಿದವರಿಗೆ ಉತ್ತರ ಕೊಟ್ಟಿದ್ದೇನೆ.. ದೀಪಿಕಾ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.