ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂಟಿಯಾಗಿ ಬರುವ ಮಹಿಳೆಯರಿಗೆ ಪ್ರವೇಶವಿಲ್ಲ: ಜಾಮಾ ಮಸೀದಿ

Last Updated 24 ನವೆಂಬರ್ 2022, 9:40 IST
ಅಕ್ಷರ ಗಾತ್ರ

ನವದೆಹಲಿ:ಒಂಟಿಯಾಗಿ ಬರುವ ಮಹಿಳೆಯರಿಗೆದೆಹಲಿಯಲ್ಲಿರುವ ಜಾಮಾ ಮಸೀದಿ ಆಡಳಿತ ಪ್ರವೇಶ ನಿರಾಕರಿಸಿದೆ.

ಈ ಸಂಬಂಧ ಪ್ರತಿಕ್ರಿಯೆ ನೀಡಿರುವಜಾಮಾ ಮಸೀದಿ ಪಿಆರ್‌ಒ ಸಬಿವುಲ್ಲಾ ಖಾನ್, ಒಂಟಿಯಾಗಿ ಬರುವ ಮಹಿಳೆಯರಿಗೆ ಮಾತ್ರವೇ ನಿರ್ಬಂಧ ಅನ್ವಯವಾಗುತ್ತದೆ. ಕುಟುಂಬದೊಂದಿಗೆ ಅಥವಾ ಪತಿಯೊಂದಿಗೆ ಬರುವ ಮಹಿಳೆಯರಿಗೆ ಅನ್ವಯವಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಹಾಗೆಯೇ, ಮಸೀದಿ ಆವರಣದಲ್ಲಿ ನಡೆಯುವ ಅನುಚಿತ ವರ್ತನೆಗಳಿಗೆ ಕಡಿವಾಣ ಹಾಕಲು ಈ ಕ್ರಮ ಕೈಗೊಳ್ಳಲಾಗಿದೆ ಎಂದೂ ತಿಳಿಸಿದ್ದಾರೆ.

'ಮಸೀದಿಗೆ ಮಹಿಳೆಯರು ಪ್ರವೇಶಿಸದಂತೆ ನಿಷೇಧ ಹೇರಿಲ್ಲ. ಮಹಿಳೆಯರು ಒಬ್ಬಂಟಿಯಾಗಿ ಬಂದಾಗ ಅನುಚಿತವಾಗಿ ವರ್ತಿಸುವುದು, ಟಿಕ್‌ಟಾಕ್‌ ಅಥವಾ ಡಾನ್ಸ್‌ ವಿಡಿಯೊಗಳನ್ನು ಚಿತ್ರೀಕರಿಸುವುದುವರದಿಯಾಗುತ್ತಿವೆ. ಇವುಗಳಿಗೆ ತಡೆಯೊಡ್ಡುವುದಕ್ಕಾಗಿ ನಿಷೇಧ ಹೇರಲಾಗಿದೆ. ಕುಟುಂಬದೊಂದಿಗೆ ಬರುವವರಿಗೆ ಅಥವಾ ದಂಪತಿಗಳಿಗೆ ಯಾವುದೇ ನಿರ್ಬಂಧ ಇಲ್ಲ. ಧಾರ್ಮಿಕ ತಾಣವನ್ನು ಹುಡುಗರು, ಹುಡುಗಿಯರ ಭೇಟಿ ಸ್ಥಳವನ್ನಾಗಿಸುವುದು ತರವಲ್ಲ' ಎಂದು ವಿವರಿಸಿದ್ದಾರೆ.

ಮಸೀದಿಯ ಈ ಕ್ರಮಕ್ಕೆ ವಿರೋಧ ವ್ಯಕ್ತವಾಗಿದೆ.ದೆಹಲಿ ಮಹಿಳಾ ಆಯೋಗದ (ಡಿಸಿಡಬ್ಲ್ಯೂ) ಅಧ್ಯಕ್ಷೆ ಸ್ವಾತಿ ಮಲಿವಾಲ್‌ ಅಸಮಾಧಾನ ವ್ಯಕ್ತಪಡಿಸಿದ್ದು, ಮಸೀದಿಯ ಮುಖ್ಯಸ್ಥರಿಗೆ ನೋಟಿಸ್ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT