ಮಂಗಳವಾರ, 28 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಂಧ್ರ ವಿಧಾನಸಭೆ ಚುನಾವಣೆ: ₹164 ಕೋಟಿ ಆಸ್ತಿ ಘೋಷಿಸಿಕೊಂಡ ನಟ ಪವನ್‌ ಕಲ್ಯಾಣ್‌

Published 23 ಏಪ್ರಿಲ್ 2024, 14:12 IST
Last Updated 23 ಏಪ್ರಿಲ್ 2024, 14:12 IST
ಅಕ್ಷರ ಗಾತ್ರ

ಅಮರಾವತಿ: ತಮ್ಮ ಬಳಿ ₹ 164.53 ಕೋಟಿ ಆಸ್ತಿ ಇರುವುದಾಗಿ ಜನಸೇನಾ ಪಕ್ಷದ ಸಂಸ್ಥಾಪಕ ಹಾಗೂ ನಟ ಪವನ್‌ ಕಲ್ಯಾಣ್‌ ಘೋಷಿಸಿಕೊಂಡಿದ್ದಾರೆ.

ವಿಧಾನಸಭಾ ಚುನಾವಣೆಗೆ ಆಂಧ್ರಪ್ರದೇಶದ ಪಿತಂಪುರ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ ಬಳಿಕ ಪವನ್ ಕಲ್ಯಾಣ್‌ ತಮ್ಮ ಆಸ್ತಿ ಘೋಷಣೆ ಮಾಡಿದ್ದಾರೆ.

ಚುನಾವಣಾ ಅಧಿಕಾರಿಗಳಿಗೆ ಸಲ್ಲಿಸಿದ ಅಫಿಡವಿಟ್ ಪ್ರಕಾರ, ಪವನ್‌ ಕಲ್ಯಾಣ್‌ ಅವರು ₹65.77 ಕೋಟಿ ಮೌಲ್ಯದ ಸ್ವತ್ತು ಹೊಂದಿದ್ದಾರೆ. 

ಅವರು 2018-19ನೇ ಸಾಲಿನ ಆದಾಯ ತೆರಿಗೆ ರಿಟರ್ನ್ಸ್‌ನಲ್ಲಿ ₹1.10 ಕೋಟಿ ನಷ್ಟವನ್ನು ತೋರಿಸಿದ್ದರು.

ಜನಸೇನಾ ಪಕ್ಷವು ಎರಡು ಲೋಕಸಭಾ ಮತ್ತು 21 ವಿಧಾನಸಭೆ ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದೆ.

ಸಂಚಾರ ನಿಯಮ ಉಲ್ಲಂಘಿಸಿದ್ದು ಸೇರಿದಂತೆ ಒಟ್ಟು 8 ಪ್ರಕರಣಗಳು ಪವನ್ ಕಲ್ಯಾಣ್ ಮೇಲಿವೆ

175 ವಿಧಾನಸಭೆ ಸದಸ್ಯ ಬಲ ಮತ್ತು 25 ಲೋಕಸಭಾ ಕ್ಷೇತ್ರಗಳಿರುವ ಆಂಧ್ರಪ್ರದೇಶಲ್ಲಿ ಮೇ 13 ರಂದು ಮತದಾನ ನಡೆಯಲಿದ್ದು ಜೂನ್‌ 4 ರಂದು ಮತಎಣಿಕೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT