ಹೈದರಾಬಾದ್: ಬಿಆರ್ಎಸ್ ಪಕ್ಷದ ಅಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರ ಪುತ್ರಿ ಕೆ.ಕವಿತಾ ಅವರು ಹೊಸ ಪಕ್ಷ ಕಟ್ಟಲು ಮುಂದಾಗಿದ್ದು, ಈ ಕುರಿತು ಚುನಾವಣಾ ಚಾಣಕ್ಯ ಪ್ರಶಾಂತ್ ಕಿಶೋರ್ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇದೀಗ ತೆಲಂಗಾಣ ಜಾಗೃತಿ ಸಂಘಟನೆಯ ಅಧ್ಯಕ್ಷೆಯಾಗಿ ಕಾರ್ಯನಿರ್ವಹಿಸುತ್ತಿರುವ ಅವರು, ಬಲಿಷ್ಠ ಪಕ್ಷ ಕಟ್ಟಿ ಆ ಮೂಲಕ ಚುನಾವಣಾ ಅಖಾಡಕ್ಕೆ ಮತ್ತೆ ಧುಮುಕಲು ಮುಂದಾಗಿದ್ದಾರೆ.
.ಇಂದು ಓಶೋ ಪುಣ್ಯ ಸ್ಮರಣೆ: ದೇವರೆಂದರೆ ಹೃದಯದೊಳಗಿನ ಪ್ರೀತಿ.ರಾಜಸ್ಥಾನದಲ್ಲಿ SIR: ಮತದಾರರ ಪಟ್ಟಿಯಿಂದ 45 ಲಕ್ಷ ಜನರ ಹೆಸರು ಮಾಯ–ಕಾಂಗ್ರೆಸ್ .
ಇತ್ತೀಚೆಗೆ ಹೈದರಾಬಾದ್ನಲ್ಲಿ ಕಿಶೋರ್ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ರಾಜಕೀಯ ಪಕ್ಷ ಸ್ಥಾಪನೆ, ಕಾರ್ಯತಂತ್ರ, ಪರಿಣಾಮಕಾರಿಯಾಗಿ ಪಕ್ಷ ಸಂಘಟನೆ ಕುರಿತಂತೆ ಕಿಶೋರ್ ಜತೆ ಕವಿತಾ ಮಾತನಾಡಿದ್ದಾರೆ. ಈ ಬಗ್ಗೆ ಸಲಹೆಗಳನ್ನು ಪಡೆದಿದ್ದಾರೆ ಎಂದು ತೆಲಂಗಾಣ ಜಾಗೃತಿ ಮೂಲಗಳು ತಿಳಿಸಿವೆ.

ಕವಿತಾ ಅವರನ್ನು ಸೆಪ್ಟೆಂಬರ್ 2025ರಲ್ಲಿ ಪಕ್ಷದಿಂದ ಅಮಾನತುಗೊಳಿಸಲಾಯಿತು.
.ನಂದಗಡ: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ 'ವೀರಭೂಮಿ' ಲೋಕಾರ್ಪಣೆ ಮಾಡಿದ ಸಿ.ಎಂ .ದರ್ಗಾದತ್ತ ಬಾಣ ಬಿಟ್ಟಂತೆ ಸನ್ನೆ ಮಾಡಿದ ಹಿಂದೂ ನಾಯಕಿ: ಏಳು ಜನರ ಮೇಲೆ ಕೇಸ್.
ಬಿಆರ್ಎಸ್ ಆಡಳಿತದ ಅವಧಿಯಲ್ಲಿ ಸಹೋದರ ಸಂಬಂಧಿಗಳು ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದಾರೆ. ಈ ಮೂಲಕ ತಂದೆಯ ವರ್ಚಸ್ಸಿಗೆ ಕಳಂಕ ತಂದಿದ್ದಾರೆ ಎಂದು ಕವಿತಾ ಆರೋಪಿಸಿದ್ದರು.

'ಒಂದು ದಿನ ನಾನೂ ಮುಖ್ಯಮಂತ್ರಿಯಾಗುತ್ತೇನೆ. ಬಿಆರ್ಎಸ್ ಮತ್ತು ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಭ್ರಷ್ಟಾಚಾರ ಮತ್ತು ಅಕ್ರಮಗಳನ್ನು ಹೊರಗೆಳೆಯುತ್ತೇನೆ' ಎಂದು ಇತ್ತೀಚೆಗೆ ಕವಿತಾ ಹೇಳಿದ್ದರು.
.ಜಿಬಿಎ: 5 ನಗರ ಪಾಲಿಕೆಗಳ ವಾರ್ಡ್ವಾರು ಕರಡು ಪಟ್ಟಿಯಲ್ಲಿ 88,91,411 ಮತದಾರರು.ಶಾಸಕ ಹರೀಶ್ ಜಾತಿ ನಿಂದನೆ ಪ್ರಕರಣ: ಪೊಲೀಸ್ ಠಾಣೆಗೆ BJP ಕಾರ್ಯಕರ್ತರ ಮುತ್ತಿಗೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.