ಸೋಮವಾರ ಕಮಲ್ ನಾಥ್ ಅವರ ನಿವಾಸದಲ್ಲಿ ಸಭೆ ನಡೆದ ನಂತರ ಅವರ ಸಹವರ್ತಿ ಸಜ್ಜನ್ ಸಿಂಗ್ ವರ್ಮಾ ಮಾತನಾಡಿ, ‘40 ವರ್ಷಗಳ ಕಾಲ ಇದ್ದ ಕಾಂಗ್ರೆಸ್ ಪಕ್ಷವನ್ನು ತೊರೆಯುವ ಆಲೋಚನೆಯೇನೂ ಕಮಲ್ ನಾಥ್ ಅವರಿಗೆ ಇಲ್ಲ. ಅವರೇ ಹೈಕಮಾಂಡ್ ಆಗಿರುವಾಗ ಇಂತಹ ಪ್ರಶ್ನೆಯಾದರೂ ಹೇಗೆ ಮೂಡುತ್ತದೆ?’ ಎಂದು ಪ್ರತಿಕ್ರಿಯಿಸಿದರು.