ನಟಿ ಕಂಗನಾ ರನೌತ್ ಅವರಿಗೆ ಫೇಸ್‌ಬುಕ್ ಮೂಲಕ ಅತ್ಯಾಚಾರದ ಬೆದರಿಕೆ ಒಡ್ಡಲಾಗಿದೆ. ಒಡಿಶಾದ ವಕೀಲರೊಬ್ಬರ ಖಾತೆಯಿಂದ ಈ ಸಂದೇಶ ಬಂದಿತ್ತು. ಎಚ್ಚೆತ್ತ ಅವರು ‘ನನ್ನ ಫೇಸ್‌ಬುಕ್ ಖಾತೆಯನ್ನು ಹ್ಯಾಕ್ ಮಾಡಲಾಗಿದೆ. ನಾವು ಯಾವುದೇ ಮಹಿಳೆ ಅಥವಾ ಸಮುದಾಯದ ವಿರುದ್ಧ ಅಗೌರವಯುತವಾಗಿ ಮಾತನಾಡಿಲ್ಲ. ನನಗೂ ಇದರಿಂದ ಆಘಾತವಾಗಿದೆ. ದಯಮಾಡಿ ಕ್ಷಮಿಸಿಬಿಡಿ’ ಎಂದು ಬರೆದುಕೊಂಡಿದ್ದಾರೆ. ಬಳಿಕ ಆ ಖಾತೆಯನ್ನೇ ನಿಷ್ಕ್ರಿಯಗೊಳಿಸಲಾಗಿದೆ.

ಪೋಸ್ಟ್ ಹಿನ್ನೆಲೆಯೇನು?

ಕಂಗನಾ ಅವರು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ‘ಈ ಬಾರಿ ನವರಾತ್ರಿಯಲ್ಲಿ ಯಾರೆಲ್ಲಾ ಉಪವಾಸ ಮಾಡುತ್ತಿದ್ದೀರಿ? ನಾನೂ ಉಪವಾಸ ಮಾಡುತ್ತಿದ್ದೇನೆ. ಆ ಚಿತ್ರಗಳನ್ನು ಇಲ್ಲಿ ಹಾಕಿದ್ದೇನೆ.ಮಹಾರಾಷ್ಟ್ರದ ಪಪ್ಪು ಸೇನೆ (ಮಹಾರಾಷ್ಟ್ರ ಸರ್ಕಾರ) ನನ್ನ ವಿರುದ್ಧ ಇನ್ನೊಂದು ಎಫ್‌ಐಆರ್ ದಾಖಲಿಸಿದೆ. ನನ್ನ ಮೇಲೆ ಕೇಸು ದಾಖಲಿಸುವುದು ಒಂದು ಗೀಳಾಗಿಬಿಟ್ಟಿದೆ. ನನ್ನನ್ನು ದೂರವಿಡಬೇಡಿ. ನವರಾತ್ರಿಗೆ ನಾನು ಮತ್ತೆ ಅಲ್ಲಿ (ಮಹಾರಾಷ್ಟ್ರ) ಇರುತ್ತೇನೆ’ ಎಂದು ಬರೆದುಕೊಂಡಿದ್ದರು.

ಇದಕ್ಕೆ ಪ್ರತಿಕ್ರಿಯೆ ನೀಡಿದವರ ಪೈಕಿ ಒಡಿಶಾದ ವಕೀಲರೊಬ್ಬರು ಅತ್ಯಾಚಾರದ ಬೆದರಿಕೆ ಒಡ್ಡಿದ್ದರು. ಪ್ರಕರಣದ ಬಗ್ಗೆ ಕಂಗನಾ ಇದುವರೆಗೆ ಪ್ರತಿಕ್ರಿಯೆ ನೀಡಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.