ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುದ್ಧ ಭೀತಿ: ಕಾಶ್ಮೀರದ ಆಸ್ಪತ್ರೆಗಳ ಛಾವಣಿಗಳ ಮೇಲೆ ರೆಡ್‌ಕ್ರಾಸ್‌ ಚಿಹ್ನೆ 

Last Updated 28 ಫೆಬ್ರುವರಿ 2019, 13:33 IST
ಅಕ್ಷರ ಗಾತ್ರ

ಶ್ರೀನಗರ: ಪಾಕಿಸ್ತಾನದ ಮೇಲಿನ ಭಾರತದ ವೈಮಾನಿಕ ದಾಳಿಯ ಬಳಿಕ ಉಭಯ ದೇಶಗಳ ನಡುವೆ ಬಿಗುವಿನ ವಾತಾವರಣ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ಕಾಶ್ಮೀರದ ಆಸ್ಪತ್ರೆಗಳ ಛಾವಣಿಗಳ ಮೇಲೆ ದೊಡ್ಡದಾಗಿ ರೆಡ್‌ಕ್ರಾಸ್ ಚಿಹ್ನೆಯನ್ನುಬರೆಯಲಾಗುತ್ತಿದೆ.

ಯುದ್ಧ ಸಂತ್ರಸ್ತರ ವೈದ್ಯಕೀಯ ನೆರವಿಗೆಹಾಗೂ ಶತ್ರು ಪಡೆಗಳುಆಸ್ಪತ್ರೆಗಳ ಮೇಲೆ ದಾಳಿ ಮಾಡುವುದನ್ನು ತಡೆಯುವ ಸಲುವಾಗಿ, ಛಾವಣಿಗಳ ಮೇಲೆ ರೆಡ್‌ಕ್ರಾಸ್‌ ಸಂಕೇತವನ್ನು ಕೆಂಪು ಬಣ್ಣದಲ್ಲಿ ಬರೆಯಲಾಗುತ್ತಿದೆ. ಯುದ್ಧ ಅಥವಾ ಯುದ್ಧ ಭೀತಿಯ ಸಂದರ್ಭಗಳಲ್ಲಿ ರೆಡ್‌ ಕ್ರಾಸ್‌ ಚಿಹ್ನೆ ಬರೆಯುವುದು ಅಂತರರಾಷ್ಟ್ರೀಯ ಶಿಷ್ಟಾಚಾರವಾಗಿದೆ.

ಮಂಗಳವಾರಶ್ರೀನಗರದಲ್ಲಿನ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಛಾವಣಿಯ ಮೇಲೆ ರೆಡ್‌ಕ್ರಾಸ್‌ ಚಿಹ್ನೆಯನ್ನುಬರೆಯಲಾಗಿದೆ. ಇಲ್ಲಿನ ಎಸ್‌ಎಂಎಚ್‌ಎಸ್‌ ಆಸ್ಪತ್ರೆ, ಲಾಲ್‌ ಆಸ್ಪತ್ರೆ ಸೇರಿದಂತೆ ಪ್ರಮುಖ ಆಸ್ಪತ್ರೆಗಳ ಛಾವಣಿಗಳ ಮೇಲೆ ರೆಡ್‌ಕ್ರಾಸ್‌ ಅಥವಾ ಎಚ್‌ ಅಕ್ಷರದ ಚಿಹ್ನೆಯನ್ನುಬರೆಯುವಂತೆ ಸ್ಥಳೀಯ ಆಡಳಿತ ಸೂಚನೆ ನೀಡಿದೆ.

ಗಡಿ ಜಿಲ್ಲೆಗಳಾದ ಕುಪ್ವಾರ ಮತ್ತು ಭಾರಾಮುಲ್ಲಜಿಲ್ಲೆಯ ಆಸ್ಪತ್ರೆಗಳ ಛಾವಣಿಗಳ ಮೇಲೆ ರೆಡ್‌ಕ್ರಾಸ್‌ ಚಿಹ್ನೆಬರೆಯುವುದು ಕಷ್ಟ , ಒಂದು ವೇಳೆ ಬರೆದರೂ ಹಿಮದ ಪರಿಣಾಮ ಅದು ಉಳಿಯುವುದಿಲ್ಲ ಎಂದು ಕಾಶ್ಮೀರದ ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಈಗಾಗಲೇ ಜಮ್ಮು ಮತ್ತು ಕಾಶ್ಮೀರದ ಆರೋಗ್ಯ ಇಲಾಖೆಯು ಉರಿ, ಕರ್ನಾ ಸೇರಿದಂತೆ ಗಡಿಭಾಗದ ಪಟ್ಟಣಗಳಲ್ಲಿರುವ ಪ್ರಮುಖ ಆಸ್ಪತ್ರೆಗಳಛಾವಣಿಗಳ ಮೇಲೆ ರೆಡ್‌ಕ್ರಾಸ್‌ ಚಿಹ್ನೆಬರೆಯುವಂತೆ ಸೂಚಿಸಿದೆ.

ವೈದ್ಯಕೀಯ ಸೇವೆ ನೀಡುವ ಆಸ್ಪತ್ರೆಗಳು ಮತ್ತು ಚಿಕಿತ್ಸಾಲಯಗಳು ಛಾವಣಿಗಳ ಮೇಲೆ ರೆಡ್‌ಕ್ರಾಸ್‌ ಚಿಹ್ನೆಯನ್ನುಬರೆಯಬೇಕು. ಹಾಗೇ ಮಾನಸಿಕ ಚಿಕಿತ್ಸಾ ಆಸ್ಪತ್ರೆಗಳು ಬಿಳಿ ಬಣ್ಣದ ರೆಡ್‌ಕ್ರಾಸ್‌ ಸಂಕೇತ ಬರೆಯಬೇಕು. ಪಶು ವೈದ್ಯಾಲಯಗಳುನೀಲಿ ಬಣ್ಣದಲ್ಲಿ ರೆಡ್‌ಕ್ರಾಸ್‌ ಸಂಕೇತವನ್ನು ಬರೆಯಬೇಕ ಎಂದುಅಂತರರಾಷ್ಟ್ರೀಯ ಶಿಷ್ಟಾಚಾರ ಹೇಳುತ್ತದೆ.

‌ಖಾಸಗಿ ಆಸ್ಪತ್ರೆಗಳು ಸಹ ರೆಡ್‌ಕ್ರಾಸ್‌ ಸಂಕೇತಗಳನ್ನು ಬರೆದು ಕೊಳ್ಳಬೇಕು. ಇದಕ್ಕೆ ಸರ್ಕಾರ ಹಣಕಾಸು ನೆರವು ನೀಡುವುದಿಲ್ಲ. ವೈಮಾನಿಕವೀಕ್ಷಣೆಯಲ್ಲಿ ಈ ಚಿಹ್ನೆಗಳುದೊಡ್ಡದಾಗಿ ಕಾಣುವಂತಿರಬೇಕು ಎಂದು ಅಧಿಕಾರಿಗಳು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT