ನವದೆಹಲಿ: ಮುಂಬರುವ ದೆಹಲಿ ವಿಧಾನಸಭೆ ಚುನಾವಣೆ ಹಿನ್ನೆಲೆ ಎಎಪಿ ಪಕ್ಷವು ರಾಜಕೀಯ ಕಾರ್ಯತಂತ್ರ ರೂಪಿಸಿದೆ. ಇದರ ಭಾಗವಾಗಿ 18 ವರ್ಷ ಮೇಲ್ಪಟ್ಟ ಎಲ್ಲಾ ಹೆಣ್ಣು ಮಕ್ಕಳು ಹಾಗೂ ಮಹಿಳೆಯರಿಗೆ ಮಾಸಿಕ ₹1,000 ಒದಗಿಸುವ ಯೋಜನೆಯು ಪ್ರಾರಂಭವಾಗಲಿದೆ ಎಂದು ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ ಕೇಜ್ರಿವಾಲ್ ಭಾನುವಾರ ಘೋಷಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಳೆಯಿಂದ (ಡಿ.23) ಈ ಯೋಜನೆಗೆ ಚಾಲನೆ ದೊರೆಯಲಿದ್ದು, ಮಹಿಳೆಯರು ಅರ್ಜಿ ಸಲ್ಲಿಸಲು ಎಲ್ಲಿಯೂ ಹೋಗಬೇಕಿಲ್ಲ. ನಮ್ಮ ಸ್ವಯಂ ಸೇವಕರು ನಿಮ್ಮ ಮನೆ ಬಾಗಿಲಿಗೆ ಬಂದು ನೋಂದಾಯಿಸಿಕೊಳ್ಳುತ್ತಾರೆ. ಅರ್ಹತಾ ಗುರುತಿನ ಚೀಟಿ ತೋರಿಸಿ ಎಲ್ಲಾ ಮಹಿಳೆಯರು ಈ ಯೋಜನೆಯ ಲಾಭ ಪಡೆಯಬಹುದು ಎಂದು ಹೇಳಿದ್ದಾರೆ.
.ರೋಹಿತ್ ರಣನೀತಿ ಬದಲಾಯಿಸಬೇಕು, ಆಕ್ರಮಣಕಾರಿಯಾಗಿ ಆಡಬೇಕು: ರವಿ ಶಾಸ್ತ್ರಿ.ಅಂತರ್ಜಲದಲ್ಲಿ ಆರ್ಸೆನಿಕ್: ಪಶ್ಚಿಮ ಬಂಗಾಳ, ಬಿಹಾರ ಹೆಚ್ಚು ಭಾದಿತ.
2024–25ರ ಬಜೆಟ್ನಲ್ಲಿ ದೆಹಲಿ ಸರ್ಕಾರವು 18 ವರ್ಷ ಮೇಲ್ಪಟ್ಟ ಎಲ್ಲಾ ಮಹಿಳೆಯರಿಗೆ ಮಾಸಿಕ ₹1,000 ನೀಡುವ ಯೋಜನೆ ಘೋಷಿಸಿತ್ತು. ಇತ್ತೀಚೆಗೆ ಚುನಾವಣಾ ಪ್ರಚಾರದಲ್ಲಿ ತಮ್ಮ ಪಕ್ಷ ಮತ್ತೆ ಅಧಿಕಾರಕ್ಕೆ ಬಂದರೆ ಈ ಮೊತ್ತವನ್ನು ₹2,100ಕ್ಕೆ ಹೆಚ್ಚಿಸಲಾಗುವುದು ಎಂದು ಕೇಜ್ರಿವಾಲ್ ಭರವಸೆ ನೀಡಿದ್ದರು.

ಎಎಪಿ ಮತ್ತೆ ಅಧಿಕಾರಕ್ಕೆ ಬಂದರೆ ಸಂಜೀವಿನಿ ಯೋಜನೆಯನ್ನು ಪ್ರಾರಂಭಿಸಲಾಗುವುದು. ಈ ಯೋಜನೆಯನ್ನು 60 ವರ್ಷ ಮೇಲ್ಪಟ್ಟ ಎಲ್ಲಾ ನಾಗರಿಕರು ಇದರ ಸದುಪಯೋಗ ಪಡೆಯಬಹುದಾಗಿದೆ. ವಯಸ್ಸಾದವರ ಮನೆಗಳಿಗೆ ತೆರಳಿ ಸ್ವಯಂ ಸೇವಕರು ಹೋಗಿ ನೋಂದಾಯಿಸಿಕೊಳ್ಳುತ್ತಾರೆ ಎಂದು ಕೇಜ್ರಿವಾಲ್ ಇತ್ತೀಚೆಗೆ ತಿಳಿಸಿದ್ದರು.
.IND vs AUS: ರೋಹಿತ್ ಮೊಣಕಾಲಿಗೆ ಪೆಟ್ಟು, ಆಕಾಶ್ ದೀಪ್ಗೂ ಗಾಯ.ಮಧ್ಯಪ್ರದೇಶ: ಗುಡಿಸಲಿಗೆ ಬೆಂಕಿ ತಗುಲಿ ಮೂವರ ಸಾವು.ದೆಹಲಿಯಲ್ಲಿ ಬಾಂಗ್ಲಾದ 175 ಅಕ್ರಮ ವಲಸಿಗರ ಪತ್ತೆ.ಕನ್ನಡ ಸಾಹಿತ್ಯ ಸಮ್ಮೇಳನ | ಮೊಳಗಿದ ಅರ್ಜುನ್ ‘ಜನ್ಯ’; ತೇಲಿದ ಜನ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.