ಪಟ್ನಾ :ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಗುಜರಾತ್‌ನಲ್ಲಿ ಯಾದವ ಸಮುದಾಯವನ್ನು ಅವಮಾನಿಸಿದ್ದಾರೆ ಎಂದು ಬಿಜೆಪಿ ಒಬಿಸಿ ಮೋರ್ಚಾ ಭಾನುವಾರ ಆರೋಪಿಸಿದೆ.

ಎಎಪಿ ಮುಖ್ಯಸ್ಥರು ಜನಾಂಗೀಯ ಹೇಳಿಕೆ ಹಿಂಪಡೆಯಬೇಕು ಎಂದುಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ನಿಖಿಲ್ ಆನಂದ್ ಒತ್ತಾಯಿಸಿದ್ದಾರೆ.

‘ಜನ್ಮಾಷ್ಟಮಿಯಂದು ಜನಿಸಿದ್ದು, ಶ್ರೀ ಕೃಷ್ಣ ಮಾಡಿದಂತೆ ಕಂಸನ ವಂಶಸ್ಥರನ್ನು ಸೋಲಿಸುವುದಾಗಿ’ ಕೇಜ್ರಿವಾಲ್ ಪ್ರತಿಜ್ಞೆ ಮಾಡಿದ ಹೇಳಿಕೆಗಳನ್ನು ಆನಂದ್ ಖಂಡಿಸಿದರು.

‘ಜನ್ಮಾಷ್ಟಮಿಯಂದು ಜನಿಸಿದ ಮಾತ್ರಕ್ಕೆ ಕೇಜ್ರಿವಾಲ್ ತನ್ನನ್ನು ಶ್ರೀಕೃಷ್ಣನೊಂದಿಗೆ ಸಮೀಕರಿಸಿಕೊಳ್ಳಬಹುದೆಂದು ಭಾವಿಸಿದ್ದಾರೆ. ಆದರೆ, ತನ್ನ ಪಾಪಗಳಿಗಾಗಿ ಕಂಸನನ್ನು ಕೃಷ್ಣ ಶಿಕ್ಷಿಸಿದ್ದಾನೆ. ಮಥುರಾದ ರಾಜನ ಸಂಪೂರ್ಣ ಕುಲವನ್ನು ನಾಶಮಾಡಲು ಎಂದಿಗೂ ಪ್ರಯತ್ನಿಸಲಿಲ್ಲ ಎಂಬುದನ್ನು ಅರಿತುಕೊಳ್ಳಬೇಕು’ ಎಂದು ಬಿಹಾರ ಬಿಜೆಪಿ ವಕ್ತಾರರೂ ಆಗಿರುವ ಆನಂದ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.