ಪಾಲಕ್ಕಾಡ್ : ಕೇರಳದ ವಡಕಾಂತಾರದಲ್ಲಿರುವ ಶಾಲೆಯೊಂದರ ಆವರಣದ ಹೊರಗೆ ಅಪಾಯಕಾರಿ ಸ್ವರೂಪದ ಸ್ಫೋಟಕಗಳು ಪತ್ತೆಯಾಗಿವೆ.

ಕಾಡುಹಂದಿ ತಡೆಗಟ್ಟಲು ಬಳಸಲಾಗುವ ಸಾಧನಗಳಲ್ಲಿ ಸ್ಫೋಟಕಗಳು ಪತ್ತೆಯಾಗಿವೆ ಎಂದು ಪ್ರಥಮ ಮಾಹಿತಿ ವರದಿ ತಿಳಿಸಿದೆ.

ನಾರಾಯಣನ್ ಎಂಬ 10 ವರ್ಷದ ವಿದ್ಯಾರ್ಥಿ ನಿನ್ನೆ ಮಧ್ಯಾಹ್ನ 3.45 ರ ಸುಮಾರಿಗೆ ವಡಕಾಂತಾರದಲ್ಲಿರುವ ವ್ಯಾಸ ವಿದ್ಯಾ ಪೀಠೋಮ್ ಪ್ರಾಥಮಿಕ ಶಾಲೆಯ ಆವರಣದ ಗೇಟ್ ಬಳಿ ಸ್ಫೋಟಕಗಳನ್ನು ನೋಡಿದ್ದಾನೆ.
.ದೆಹಲಿಯ ಶಾಲೆಗಳಿಗೆ ಬಾಂಬ್ ಬೆದರಿಕೆ: 4 ಎಂಜಿನ್ ಸರ್ಕಾರ ಅಸುರಕ್ಷಿತ; ಕೇಜ್ರಿವಾಲ್.
ನಾರಾಯಣನ್ ಉತ್ಸುಕನಾಗಿ ಸ್ಫೋಟಕಗಳನ್ನು ನೆಲಕ್ಕೆ ಹೊಡೆಯುತ್ತಿದ್ದಂತೆ ಭೀಕರ ಶಬ್ದದೊಂದಿಗೆ ಸ್ಫೋಟಗೊಂಡಿದೆ. ಇದರ ಪರಿಣಾಮ ಆತನಿಗೂ ಹಾಗೂ ಹತ್ತಿರ ಇದ್ದ 84 ವರ್ಷದ ಲೀಲಾ ಎಂಬ ವೃದ್ದೆಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ಬಳಿಕ ಶಾಲಾ ಸಿಬ್ಬಂದಿಗಳು ಮತ್ತು ನಿವಾಸಿಗಳು ಸ್ಥಳಕ್ಕೆ ಧಾವಿಸಿ ಪೊಲೀಸರಿಗೆ ಕರೆ ಮಾಡಿದ್ದಾರೆ. ಸ್ಥಳ ಪರಿಶೀಲನೆ ನಡೆಸಿದಾಗ ಬಕೆಟ್ನಲ್ಲಿ ಇನ್ನೂ ನಾಲ್ಕು ಸ್ಫೋಟಕಗಳು ಪತ್ತೆಯಾಗಿವೆ.
.ದೆಹಲಿಯ 3 ಶಾಲೆಗಳಿಗೆ ಬಾಂಬ್ ಬೆದರಿಕೆ ಇ–ಮೇಲ್; ಆಂತಕಗೊಂಡ ವಿದ್ಯಾರ್ಥಿಗಳು.
ಸ್ಫೋಟಕ ವಸ್ತು ಕಾಯ್ದೆ ಸೆಕ್ಷನ್ 3(ಎ) (ಜೀವಕ್ಕೆ ಅಪಾಯವನ್ನುಂಟುಮಾಡುವ ಸ್ಫೋಟಕ ಬಳಕೆ) ಸೆಕ್ಷನ್ 4(ಎ) ( ಸ್ಫೋಟಕ ಬಳಸಿ ಜೀವ ಮತ್ತು ಹಾನಿಯುಂಟುಮಾಡುವ ಉದ್ದೇಶ ) ಹಾಗೂ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಸಂಬಂಧಿಸಿದಂತೆ ಬಾಲ ಅಪರಾಧ ನ್ಯಾಯ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪಾಲಕ್ಕಾಡ್ ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.