ತಿರುವನಂತಪುರ: ಶಿರೋವಸ್ತ್ರ (ಸ್ಕಾರ್ಫ್) ಧರಿಸಿದ ಶಿಕ್ಷಕಿಯೇ ಹಿಜಾಬ್ ಧರಿಸಿದ ವಿದ್ಯಾರ್ಥಿನಿಗೆ ಅವಕಾಶ ನೀಡದ್ದು ಅಚ್ಚರಿ ಹಾಗೂ ವ್ಯಂಗ್ಯ ಎಂದು ಕೇರಳ ಶಿಕ್ಷಣ ಸಚಿವ ವಿ. ಶಿವನ್ಕುಟ್ಟಿ ಹೇಳಿದ್ದಾರೆ.
.ಕೇರಳ ಹಿಜಾಬ್ ವಿವಾದ: ಮಗಳನ್ನು ಬೇರೆ ಶಾಲೆಗೆ ಸೇರಿಸುತ್ತೇವೆ ಎಂದ ಪೋಷಕರು.
ಕೊಚ್ಚಿಯ ಪಳ್ಳುರುತ್ತಿ ಸಂತ ರೀಟಾ ಚರ್ಚ್ ಶಾಲೆಯ ಹಿಜಾಬ್ ವಿವಾದದ ಬಗ್ಗೆ ಅವರು ಪ್ರತಿಕ್ರಿಯಿಸಿದರು.

ಖಾಸಗಿ ಶಾಲಾ ಆಡಳಿತ ಮಂಡಳಿಗಳೂ ಕೇರಳ ಸರ್ಕಾರ ಶಿಕ್ಷಣ ಇಲಾಯ ನಿಯಮಗಳ ಅನ್ವಯವೇ ಕಾರ್ಯಾಚರಣೆ ಮಾಡಬೇಕು. ಯಾರೂ ನಿಯಮಗಳಿಗಿಂತ ಮಿಗಿಲಲ್ಲ ಎಂದು ಹೇಳಿದ್ದಾರೆ.

ಹಿಜಾಬ್ ಧರಿಸಿದ ಕಾರಣಕ್ಕೆ ವಿದ್ಯಾರ್ಥಿಗೆ ಶಾಲೆಯಲ್ಲಿ ಅವಕಾಶ ಕೊಡದೇ ಇದ್ದರೆ ಸರ್ಕಾರ ನೋಡಿಕೊಂಡು ಸುಮ್ಮನೆ ಕೂರುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
.ಕೇರಳ ಶಾಲೆಯ ಹಿಜಾಬ್ ಗದ್ದಲ: 2ದಿನ ತುರ್ತು ರಜೆ; ನಿಯಮ ಪಾಲನೆಗೆ ಪಾಲಕ ಒಪ್ಪಿಗೆ.
ನಾವು ತನಿಖೆ ನಡೆಸಿದ್ದು, ಶಾಲೆಯಿಂದಾದ ಲೋಪಗಳನ್ನು ಪತ್ತೆಹಚ್ಚಿ ಅವುಗಳನ್ನು ಸರಿಪಡಿಸುವಂತೆ ಹೇಳಿದ್ದೇವೆ ಎಂದು ತಿಳಿಸಿದ್ದಾರೆ.

ಶಾಲೆ ಆಡಳಿತ ಮಂಡಳಿ ಮೊಂಡುತನ ಹಾಗೂ ವೈಷಮ್ಯ ಬದಿಗಿಟ್ಟು ಶಾಂತಿಯುತ ವಾತಾವರಣ ನಿರ್ಮಾಣ ಮಾಡಿ, ವಿದ್ಯಾರ್ಥಿನಿಗೆ ಶಿಕ್ಷಣ ಮುಂದುವರಿಸಲು ಬೇಕಾದ ಅಗತ್ಯ ಕ್ರಮ ತೆಗೆದುಕೊಳ್ಳಬೇಕಿತ್ತು ಎಂದು ಹೇಳಿದ್ದಾರೆ.

ಘಟನೆಯನ್ನು ಶಿಕ್ಷಣ ಸಚಿವರೇ ಉಲ್ಬಣಗೊಳಿಸುತ್ತಿದ್ದಾರೆ ಎನ್ನುವ ಕಾಂಗ್ರೆಸ್ ನೇತೃತ್ವದ ವಿರೋಧ ಪಕ್ಷಗಳ ಟೀಕೆಗೆ ಉತ್ತರಿಸಿದ ಅವರು, ‘ಸಚಿವರು ಇದಕ್ಕೆ ಮಧ್ಯಪ್ರವೇಶ ಮಾಡಬಾರದು ಎಂದು ಶಾಲೆಯು ಸರ್ಕಾರಕ್ಕೆ ಸವಾಲೆಸೆಯುತ್ತಿರುವಾಗ ನಾವು ಸಮ್ಮನಿರಲು ಸಾಧ್ಯವಿಲ್ಲ’ ಎಂದು ಹೇಳಿದ್ದಾರೆ.
.ಐಫೆಲ್ ಟವರ್ಗೆ ಹಿಜಾಬ್: ಫ್ರಾನ್ಸ್ನಲ್ಲಿ ಮತ್ತೆ ಸದ್ದು ಮಾಡಿದ ಹಿಜಾಬ್ ವಿವಾದ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.