ರಾಯಪುರ: ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯ ಎರಡನೇ ಪಂದ್ಯದಲ್ಲೂ ವಿರಾಟ್ ಕೊಹ್ಲಿ ಶತಕ ಸಿಡಿಸಿದ್ದಾರೆ.

ಹರಿಣಗಳ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅವರು 93 ಎಸೆತಗಳಲ್ಲಿ 102 ರನ್ ಗಳಿಸಿ ಔಟ್ ಆದರು.

ಕಿಂಗ್ ಕೊಹ್ಲಿ ಶತಕದ ಇನಿಂಗ್ಸ್ ಹಲವು ದಾಖಲೆಗಳಿಗೆ ಕಾರಣವಾಗಿದೆ. ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಅವರ ಬ್ಯಾಟ್ನಿಂದ ಸಿಡಿದ 84ನೇ ಶತಕ ಇದಾಗಿದೆ.
.ಎರಡನೇ ಪಂದ್ಯದಲ್ಲೂ ಟಾಸ್ ಸೋತ ಭಾರತ:ಕೊನೆಯ ಬಾರಿ ಟಾಸ್ ಗೆದ್ದಿದ್ದು ಆ ಪಂದ್ಯದಲ್ಲಿ.
ಮೂರನೇ ಕ್ರಮಾಂಕದಲ್ಲಿ ಅತಿ ಹೆಚ್ಚು ಶತಕ:

ಮೂರನೇ ಕ್ರಮಾಂಕದ ‘ಕಿಂಗ್’ಎಂದೇ ಗುರುತಿಸಿಕೊಂಡಿರುವ ಕೊಹ್ಲಿ ಬ್ಯಾಟ್ನಿಂದ ಆ ಕ್ರಮಾಂಕದಲ್ಲಿ ಇದುವರೆಗೂ 46 ಶತಕ ಸಿಡಿಸಿದ್ದಾರೆ. ಈ ಮೂಲಕ ಒಂದೇ ಕ್ರಮಾಂಕದಲ್ಲಿ ಅತಿ ಹೆಚ್ಚು ಶತಕ ಸಿಡಿಸಿದ ಆಟಗಾರ ಎನ್ನುವ ಖ್ಯಾತಿಗೆ ಭಾಜನರಾಗಿದ್ದಾರೆ.

ಸಚಿನ್ ತೆಂಡೂಲ್ಕರ್ ಅವರು ಆರಂಭಿಕರಾಗಿ ಏಕದಿನ ಕ್ರಿಕೆಟ್ನಲ್ಲಿ 45 ಶತಕ ಸಿಡಿಸಿದ್ದರೆ, ಟೆಸ್ಟ್ನಲ್ಲಿ ನಾಲ್ಕನೇ ಕ್ರಮಾಂಕದಲ್ಲಿ 44 ಶತಕ ಬಾರಿಸಿದ್ದಾರೆ.

ಶ್ರೀಲಂಕಾದ ಕುಮಾರ ಸಂಗಾಕಾರ ಅವರು ಟೆಸ್ಟ್ ಕ್ರಿಕೆಟ್ನಲ್ಲಿ ಮೂರನೇ ಕ್ರಮಾಂಕದಲ್ಲಿ 37 ಶತಕ ಸಿಡಿಸಿದ್ದರೆ, ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ ಜಾಕ್ ಕಾಲೀಸ್ ಅವರು ಟೆಸ್ಟ್ ಕ್ರಿಕೆಟ್ನಲ್ಲಿ ನಾಲ್ಕನೇ ಕ್ರಮಾಂಕದಲ್ಲಿ 35 ಬಾರಿ ಶತಕ ಬಾರಿಸಿದ್ದಾರೆ.
.ICC ಏಕದಿನ ರ್ಯಾಂಕಿಂಗ್:ಅಗ್ರ ಐದರಲ್ಲಿ ಕಾಣಿಸಿಕೊಂಡ ಭಾರತದ ಸ್ಟಾರ್ ಬ್ಯಾಟರ್ಗಳು.IND vs SA: ಸತತ ಎರಡನೇ ಶತಕ ಗಳಿಸಿದ ಕಿಂಗ್ ಕೊಹ್ಲಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.