ಕಣ್ಣೂರು: ಮಂಗಳೂರು– ತಿರುವನಂತಪುರ ನಡುವೆ ಸಂಚರಿಸುವ ವಂದೇ ಭಾರತ್ ಎಕ್ಸ್ಪ್ರೆಸ್ನಲ್ಲಿ ಪ್ರಯಾಣಿಕರಿಗೆ ಅವಧಿ ಮೀರಿದ ತಂಪು ಪಾನೀಯಗಳನ್ನು ಪೂರೈಕೆ ಮಾಡಿದ ಆರೋಪದ ಕುರಿತು ತನಿಖೆ ನಡೆಸುವಂತೆ ಕೇರಳ ರಾಜ್ಯ ಮಾನವ ಹಕ್ಕುಗಳ ಆಯೋಗ ಶುಕ್ರವಾರ ಆದೇಶ ಹೊರಡಿಸಿದೆ.

ಅವಧಿ ಮೀರಿದ ತಂಪು ಪಾನೀಯ ಪೂರೈಕೆಯಾದ ಕುರಿತು ಅಲ್ಲಿನ ಸ್ಥಳೀಯ ಮಾಧ್ಯಮ ವರದಿ ಪ್ರಕಟಿಸಿತ್ತು. ಅದನ್ನು ಆಧರಿಸಿ ಆಯೋಗ ಪ್ರಕರಣ ದಾಖಲಿಸಿಕೊಂಡಿದೆ.

ಈ ಕುರಿತು ತನಿಖೆ ನಡೆಸಿ 15 ದಿನಗಳಲ್ಲಿ ವರದಿ ನೀಡುವಂತೆ ಪಾಲಕ್ಕಾಡಿನ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಿಗೆ ಸೂಚನೆ ನೀಡಿದ ಆಯೋಗದ ಸದಸ್ಯ ಕೆ. ಬೈಜುನಾಥ್ ಅವರು, ವಿಚಾರಣೆಯನ್ನು ಜೂನ್ 26ಕ್ಕೆ ಮುಂದೂಡಿದರು.

ಪಾನೀಯದ ಬಾಟಲಿಗಳ ಮೇಲಿದ್ದ ಮಾಹಿತಿಯ ಪ್ರಕಾರ, ಅದರ ತಯಾರಿಕೆಯು 2024ರ ಸೆಪ್ಟೆಂಬರ್ 25ರಂದು ಆಗಿದ್ದರೆ, ಅದರ ಅವಧಿಯು 2025ರ ಸೆಪ್ಟೆಂಬರ್ 25ರಂದು ಮುಗಿಯಲಿದೆ. ಈ ಕುರಿತು ಪ್ರಯಾಣಿಕರೊಬ್ಬರು ನೀಡಿದ್ದ ದೂರನ್ನು, ಆಹಾರ ಪೂರೈಕೆ ಸಿಬ್ಬಂದಿ ಕಡೆಗಣಿಸಿದ್ದರು ಎಂದು ಮಾಧ್ಯಮ ವರದಿ ಉಲ್ಲೇಖಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.