ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾನೂನು ಬದ್ಧವಾಗಿಯೇ ಬಾಂಡ್‌ಗಳ ಖರೀದಿ: ಜೇಕಬ್‌

Published 20 ಮಾರ್ಚ್ 2024, 14:17 IST
Last Updated 20 ಮಾರ್ಚ್ 2024, 14:17 IST
ಅಕ್ಷರ ಗಾತ್ರ

ಕೊಚ್ಚಿ: ‘ದೇಶದಲ್ಲಿ ಪ್ರಸ್ತುತ ಇರುವ ಕಾನೂನುಗಳಿಗೆ ಅನುಗುಣವಾಗಿಯೇ ನನ್ನ ಕಂಪನಿಯು ಚುನಾವಣಾ ಬಾಂಡ್‌ಗಳನ್ನು ಖರೀದಿಸಿದೆ. ಆದರೆ ಇದಕ್ಕೆ ಪ್ರತಿಯಾಗಿ ಯಾವುದೇ ಸರ್ಕಾರದಿಂದ ಒಂದು ರೂಪಾಯಿ ನೆರವನ್ನೂ ಪಡೆದಿಲ್ಲ’ ಎಂದು ಪ್ರಸಿದ್ಧ ಕೈಗಾರಿಕೋದ್ಯಮಿ ಸಾಬು ಎಂ ಜೇಕಬ್‌ ತಿಳಿಸಿದರು. 

‘ಯಾವುದೇ ರಾಜ್ಯ ಅಥವಾ ಕೇಂದ್ರ ಸರ್ಕಾರದಿಂದ ಯಾವುದೇ ರೀತಿಯಲ್ಲಿ ಕಾನೂನು ಬಾಹಿರ ಕೊಡುಗೆ ಸ್ವೀಕರಿಸಿರುವುದು ಕಂಡುಬಂದರೆ, ನಾನು ಸ್ಥಾಪಿಸಿರುವ ‘ಟ್ವಿಂಟಿ20‘ ರಾಜಕೀಯ ಪಕ್ಷದ ಎಲ್ಲ ಚಟುವಟಿಕೆಗಳನ್ನು ಕೊನೆಗೊಳಿಸುತ್ತೇನೆ’ ಎಂದು ಅವರು ಘೋಷಿಸಿದರು.

ತನ್ನ ಒಡೆತನದ, ಉಡುಪುಗಳ ತಯಾರಿಕಾ ಕಂಪನಿಯಾದ ‘ಕಿಟೆಕ್ಸ್‌ ಗ್ರೂಪ್‌’ ವಿವಿಧ ರಾಜಕೀಯ ಪಕ್ಷಗಳಿಗೆ ಚುನಾವಣಾ ಬಾಂಡ್‌ಗಳನ್ನು ಖರೀದಿಸಿದೆ ಎಂಬುದನ್ನು ಒಪ್ಪಿಕೊಂಡ ಜೇಕಬ್‌ ಅವರು, ಈ ಕುರಿತು ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿರುವ ಕಾರಣ ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸುವುದಿಲ್ಲ ಎಂದು ಹೇಳಿದರು.

‘ನಾನು ರಾಜಕೀಯ ಪಕ್ಷದ ಮುಖ್ಯಸ್ಥನಾಗಿದ್ದರೂ, ನನ್ನ ವ್ಯಾಪಾರ ಸಂಸ್ಥೆಯಿಂದ ಇತರ ರಾಜಕೀಯ ಪಕ್ಷಗಳಿಗೆ ಕೊಡುಗೆಗಳನ್ನು ನೀಡುವುದರಿಂದ ನನ್ನ ರಾಜಕೀಯ ಮತ್ತು ಸಿದ್ಧಾಂತ ಬದಲಾದಂತೆ ಆಗುವುದಿಲ್ಲ’ ಎಂದು ಅವರು ಪ್ರತಿಕ್ರಿಯಿಸಿದರು.

‘ನನ್ನ ಕಂಪನಿಯು ಚುನಾವಣಾ ಬಾಂಡ್‌ಗಳ ಖರೀದಿ ಸೇರಿದಂತೆ ಎಲ್ಲ ಚಟುವಟಿಕೆಗಳನ್ನು ಪಾರದರ್ಶಕವಾಗಿ ಮಾಡಿದೆ. ಲೆಕ್ಕ ಪರಿಶೋಧನೆಯ ಬಳಿಕ ಕಂಪನಿಯು ಬ್ಯಾಲೆನ್ಸ್ ಶೀಟ್‌ ಅನ್ನು ಪ್ರಕಟಿಸಲಾಗುತ್ತದೆ. ಈ ವಿಷಯದಲ್ಲಿ ಮುಚ್ಚಿಡಲು ಏನೂ ಇಲ್ಲ’ ಎಂದು ಅವರು ಹೇಳಿದರು.

‘ಟ್ವೆಂಟಿ20‘ ಪಕ್ಷವು 2015ರಲ್ಲಿ ರಚನೆಯಾಗಿದ್ದು, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಚಾಲಕುಡಿ, ಎರ್ನಾಕುಲಂ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT