ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭೆ ಚುನಾವಣೆ: ಎನ್‌ಡಿಎ ಸೇರುವುದಿಲ್ಲ ಎಂದ ಜೆಡಿಎಸ್‌ನ ಕೇರಳ ಘಟಕ

Published 7 ಅಕ್ಟೋಬರ್ 2023, 13:40 IST
Last Updated 7 ಅಕ್ಟೋಬರ್ 2023, 13:40 IST
ಅಕ್ಷರ ಗಾತ್ರ

ಕೊಚ್ಚಿ: ಎನ್‌ಡಿಎ ಸೇರಬೇಕು ಎನ್ನುವ ಪಕ್ಷದ ತೀರ್ಮಾನವನ್ನು ಜೆಡಿಎಸ್‌ನ ಕೇರಳ ಘಟಕ ಶನಿವಾರ ತಿರಸ್ಕರಿಸಿದೆ. ರಾಜ್ಯದಲ್ಲಿ ಎಡರಂಗದೊಂದಿಗೆ ಮೈತ್ರಿ ಮುಂದುವರಿಸುವುದಾ‌ಗಿಯೂ ಸ್ಪಷ್ಟಪಡಿಸಿದೆ.

ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಮ್ಯಾಥ್ಯೂ ಟಿ.ಥಾಮಸ್‌, ‘ಪಕ್ಷದ ವೇದಿಕೆಯಲ್ಲಿ ಚರ್ಚೆ ನಡೆಸದೇ ಹೈಕಮಾಂಡ್‌ ತನ್ನ ತೀರ್ಮಾನವನ್ನು ಘೋಷಿಸಿದೆ. ಆದರೆ, ಪಕ್ಷವು ರಾಜ್ಯದಲ್ಲಿ ಸಿಪಿಎಂ ನೇತೃತ್ವದ ಎಲ್‌ಡಿಎಫ್‌ ಜತೆ ನಾಲ್ಕು ದಶಕಗಳ ಮೈತ್ರಿ ಹೊಂದಿದ್ದು, ಅದು ಮುಂದುವರಿಯಲಿದೆ’ ಎಂದು ಹೇಳಿದರು.

ಜೆಡಿಎಸ್‌ನ ರಾಷ್ಟ್ರೀಯ ನಾಯಕತ್ವವು ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳುವ ಘೋಷಣೆ ಮಾಡಿದ್ದರೂ, ರಾಜ್ಯದಲ್ಲಿ ಸಿಪಿಎಂ ಮಾತ್ರ ಮೈತ್ರಿಕೂಟದಲ್ಲಿ ಜೆಡಿಎಸ್‌ ಅನ್ನು ಮುಂದುವರಿಸಿದೆ ಎಂದು ಕಾಂಗ್ರೆಸ್‌ ಟೀಕಿಸಿತ್ತು. ಈ ಹಿನ್ನೆಲೆಯಲ್ಲಿ ಜೆಡಿಎಸ್‌ ರಾಜ್ಯ ಘಟಕ ಈ ಸ್ಪಷ್ಟನೆ ನೀಡಿದೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT