ಇಡುಕ್ಕಿ: ಕೇರಳದ ಯೂಟ್ಯೂಬರ್ ಸಾಜನ್ ಸ್ಕರಿಯ ಅವರ ಮೇಲೆ ಹಲ್ಲೆ ನಡೆಸಿ ಪರಾಯಿಯಾಗಿದ್ದ ನಾಲ್ವರು ಆರೋಪಿಗಳನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿದೆ ಎಂದು ಕೇರಳದ ಇಡುಕ್ಕಿ ಜಿಲ್ಲೆಯ ಪೊಲೀಸರು ತಿಳಿಸಿದ್ದಾರೆ.

ಶಾಜನ್ ಸ್ಕಾರಿಯಾ ಅವರು ಮುನ್ನಡೆಸುವ Marunadan Malayali ಎಂಬ ಯೂಟ್ಯೂಬ್ ಚಾನಲ್ನಲ್ಲಿ ಇತ್ತೀಚೆಗೆ ಕೇರಳ ಸರ್ಕಾರದ ಬಗ್ಗೆ ಪ್ರಸಾರವಾಗಿದ್ದ ವಿಡಿಯೊ ಖಂಡಿಸಿ ಕಳೆದ ಶನಿವಾರ ರಾತ್ರಿ ಆರೋಪಿಗಳು ಸಾಜನ್ ಸ್ಕರಿಯ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದರು.

ಹಲ್ಲೆಗೂ ಮುನ್ನ ಯುವಕನೊಬ್ಬ ಬೆಂಗಳೂರಿನಲ್ಲಿ ಕೂತು ಫೇಸ್ಬುಕ್ನಲ್ಲಿ ಬೆದರಿಕೆ ಹಾಕಿದ್ದ. ಇದರ ಜಾಡು ಹಿಡಿದು ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

ಹಲ್ಲೆ ನಡೆದ ನಂತರ ತೋಡುಪುಳ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನಿಂದನೆ, ಕಿರುಕುಳ, ಹಲ್ಲೆ, ಕೊಲೆ ಯತ್ನ ಪ್ರಕರಣವನ್ನು ಸ್ಕರಿಯ ಆರೋಪಿಗಳ ವಿರುದ್ಧ ದಾಖಲಿಸಿದ್ದರು.

ಆರೋಪಿಗಳನ್ನು ಇಡುಕ್ಕಿಗೆ ಕರೆತಂದು ವಿಚಾರಣೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ನನ್ನ ಮೇಲೆ ಹಲ್ಲೆ ಮಾಡಿ, ಕೊಲೆಗೆ ಯತ್ನಿಸಿದವರು ಆಡಳಿತಾರೂಢ ಸಿಪಿಐಎಂನ ಕಾರ್ಯಕರ್ತರು ಎಂದು ಆರೋಪಿಸಿದ್ದಾರೆ.

Marunadan Malayali ಇದು ಸುದ್ದಿ ಯೂಟ್ಯೂಬ್ ಚಾನಲ್ ಆಗಿದ್ದು 2.88 ಮಿಲಿಯನ್ ಚಂದಾದಾರರನ್ನು ಹೊಂದಿದೆ.
.VIDEO | ಮಹೇಶ್ ಶೆಟ್ಟಿ ತಿಮರೋಡಿ ಬಂಧನ; ಯೂಟ್ಯೂಬರ್ ಸಮೀರ್ಗೆ ಜಾಮೀನು.ಗುರುಗ್ರಾಮ: ಯೂಟ್ಯೂಬರ್ ಎಲ್ವಿಶ್ ಯಾದವ್ ಮನೆಯ ಹೊರಗೆ ಗುಂಡಿನ ದಾಳಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.