‘ಅರ್ಧ ಶತಮಾನದಲ್ಲಿ 3ನೇ ಅತಿ ದೊಡ್ಡ ಪ್ರಮಾಣದ ಮಳೆ’ ಕೋಲ್ಕತ್ತ ಇತಿಹಾಸದ ಅರ್ಧ ಶತಮಾನದಲ್ಲಿ ಸೆಪ್ಟೆಂಬರ್ ತಿಂಗಳಲ್ಲಿ ಇದು ಮೂರನೇ ಬಾರಿಗೆ ಅತಿ ಹೆಚ್ಚು ಪ್ರಮಾಣದಲ್ಲಿ ಮಳೆ ಸುರಿದಿದೆ. 1978ರಲ್ಲಿ ನಗರದಲ್ಲಿ 36.9 ಸೆಂ.ಮೀ ಮತ್ತು 1986ರಲ್ಲಿ 25.9 ಸೆಂ.ಮೀ ಮಳೆ ಸುರಿದಿತ್ತು. ಬಂಗಾಳ ಕೊಲ್ಲಿಯ ಈಶಾನ್ಯ ಭಾಗದಲ್ಲಿ ವಾಯುಭಾರ ಕುಸಿತವಾಗಿದ್ದು ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ
ಭಾರತೀಯ ಹವಾಮಾನ ಇಲಾಖೆ
‘ಸಾವುಗಳಿಗೆ ಸಿಇಎಸ್‌ಇ ಜವಾಬ್ದಾರ’ ಕೋಲ್ಕತ್ತದ ವಿದ್ಯುತ್ ಸರಬರಾಜನ್ನು ‘ಸಿಇಎಸ್ಇ’ ಎಂಬ ಖಾಸಗಿ ಕಂಪನಿ ನಿರ್ವಹಿಸುತ್ತದೆ. ಇದು ನಮ್ಮ ಜವಾಬ್ದಾರಿಯಲ್ಲ. ಈ ಸಾವುಗಳಿಗೆ ಆ ಕಂಪನಿಯ ಬೇಜವಾಬ್ದಾರಿತನವೇ ಕಾರಣ. ಮೃತರ ಕುಟುಂಬಗಳಿಗೆ ಈ ಕಂಪನಿಯೇ ಉದ್ಯೋಗ ನೀಡಬೇಕು. ಅವರು ಇಲ್ಲಿ ವ್ಯವಹಾರ ಮಾಡುತ್ತಾರೆ. ಆದರೆ ವ್ಯವಸ್ಥೆಯನ್ನು ಆಧುನಿಕಗೊಳಿಸಲು ಆಗುವುದಿಲ್ಲವೇ? ಜೋತು ಬಿದ್ದ ಸುರಕ್ಷಿತವಲ್ಲದ ವಿದ್ಯುತ್ ತಂತಿಗಳನ್ನು ತಕ್ಷಣವೇ ದುರಸ್ಥಿ ಮಾಡಬೇಕು. ಜಿಎಸ್‌ಟಿ ಹೆಸರಿನಲ್ಲಿ ಕೇಂದ್ರ ಸರ್ಕಾರವು ನಮ್ಮಿಂದ ಹಣ ಕಿತ್ತುಕೊಳ್ಳುತ್ತದೆ. ಉಳಿದ ಹಣವನ್ನು ಇಂಥ ವಿಪತ್ತಿನ ಸಂದರ್ಭಕ್ಕೆ ಬಳಸಿಕೊಳ್ಳುವುದರಲ್ಲಿಯೇ ಸಂಪನ್ಮೂಲ ಮುಗಿದು ಹೋಗುತ್ತಿದೆ