ಕೋಲ್ಕತ್ತ: ಇಲ್ಲಿನ ಕಾನೂನು ಕಾಲೇಜು ವಿದ್ಯಾರ್ಥಿನಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಆಡಳಿತಾರೂಢ ತೃಣಮೂಲ ಕಾಂಗ್ರೆಸ್(ಟಿಎಂಸಿ) ಈ ಘಟನೆಯನ್ನು ಖಂಡಿಸಿದ್ದು, ಸರ್ಕಾರವು ಸಂತ್ರಸ್ತೆ ಮತ್ತು ಆಕೆಯ ಕುಟುಂಬದ ಜತೆ ನಿಲ್ಲುತ್ತದೆ ಎಂದು ಹೇಳಿದೆ.

ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಶಶಿ ಪಂಜಾ, ಈ ಘಟನೆಯನ್ನು ರಾಜಕೀಯಗೊಳಿಸಬಾರದು.ಈ ಘಟನೆ ಅತ್ಯಂತ ನೋವಿನ ಸಂಗತಿಯಾಗಿದೆ. ಕೋಲ್ಕತ್ತ ಪೊಲೀಸರು ಈಗಾಗಲೇ ಕ್ರಮಕೈಗೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.
.PV Cine Sammana-3: ಕೃಷ್ಣಂ ಪ್ರಣಯ ಸಖಿ ಅತ್ಯುತ್ತಮ ಚಿತ್ರ; ದುನಿಯಾ ವಿಜಯ್, ಅಂಕಿತಾಗೆ ಪ್ರಶಸ್ತಿ.PV Cine Sammana-3: ಕೃಷ್ಣಂ ಪ್ರಣಯ ಸಖಿ ಅತ್ಯುತ್ತಮ ಚಿತ್ರ; ದುನಿಯಾ ವಿಜಯ್, ಅಂಕಿತಾಗೆ ಪ್ರಶಸ್ತಿ.
ಈ ಘಟನೆಯನ್ನು ರಾಜಕೀಯ ಲಾಭಕ್ಕೆ ಬಳಸಿಕೊಳ್ಳದೇ ಆಕೆಯ ನೋವನ್ನು ಅರ್ಥೈಸಿ, ಆಕೆಯನ್ನು ಗೌರವಿಸಿ, ತ್ವರಿತವಾಗಿ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಬೇಕು. 'ಕೆಲವರು ಆರೋಪಿಗಳನ್ನು ವೈಭವೀಕರಿಸುತ್ತಾರೆ ಅಥವಾ ಅವರಿಗೆ ಹಾರ ಹಾಕುತ್ತಾರೆ. ಆದರೆ, ನಾವು ಸಿಹಿತಿಂಡಿಗಳನ್ನು ವಿತರಿಸುವುದಿಲ್ಲ ಅಥವಾ ಅಂತಹ ಜನರನ್ನು ರಕ್ಷಿಸುವುದಿಲ್ಲ. ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರವು ಅಪರಾಧಿಗಳನ್ನು ಎಂದಿಗೂ ರಕ್ಷಿಸುವುದಿಲ್ಲ. ಮಹಿಳೆಯರ ಘನತೆಯ ಬಗ್ಗೆ ರಾಜಿ ಮಾಡಿಕೊಳ್ಳುವುದಿಲ್ಲ' ಎಂದು ವಿರೋಧ ಪಕ್ಷದ ವಿರುದ್ಧ ಪಂಜಾ ಟೀಕಾಪ್ರಹಾರ ನಡೆಸಿದ್ದಾರೆ.

'ಇಂತಹ ಸಂಕಷ್ಟದ ಸಮಯದಲ್ಲಿ ಸಂತ್ರಸ್ತೆಗೆ ಅಗತ್ಯವಿರುವ ಎಲ್ಲ ರೀತಿಯ ಬೆಂಬಲ ಮತ್ತು ಸಹಾಯವನ್ನು ಒದಗಿಸಲು ಸರ್ಕಾರ ಬದ್ಧವಾಗಿದೆ. ನ್ಯಾಯವನ್ನು ಒದಗಿಸಲಾಗುವುದು' ಎಂದು ಟಿಎಂಸಿ ಎಕ್ಸ್ ಪೋಸ್ಟ್ನಲ್ಲಿ ತಿಳಿಸಿದೆ.
.ನೀರಜ್ ಚೋಪ್ರಾ ಪ್ರಕಾರ ಅತ್ಯುತ್ತಮವಾಗಿ ಜಾವೆಲಿನ್ ಎಸೆಯಬಲ್ಲ ಕ್ರಿಕೆಟಿಗ ಯಾರು?.ಮರಣೋತ್ತರ ಪರೀಕ್ಷೆ |4 ಗಂಟೆ ಒಳಗೆ ಪೂರ್ಣಗೊಳಿಸಿ; ಹೊಸ ಮಾರ್ಗಸೂಚಿ ಹೊರಡಿಸಿದ ಯುಪಿ.ದೀರ್ಘ ಬರಗಾಲದಿಂದ ಬಡದೇಶಗಳಲ್ಲಿ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಹೆಚ್ಚಳ:ಅಧ್ಯಯನ.ನಮ್ಮ ಮೆಟ್ರೊ ಹಳದಿ ಮಾರ್ಗ: ಜುಲೈ 15–16ಕ್ಕೆ ಅಂತಿಮ ಪರಿಶೀಲನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.