ನವದೆಹಲಿ: 'ಮಹಾಕುಂಭಮೇಳದಲ್ಲಿ ನಡೆದ ಕಾಲ್ತುಳಿತವು ದೊಡ್ಡ ಘಟನೆಯಲ್ಲ. ಆದರೆ ದೊಡ್ಡದಾಗಿ ಬಿಂಬಿಸಲಾಗುತ್ತಿದೆ' ಎಂದು ಬಿಜೆಪಿ ಸಂಸದೆ, ನಟಿ ಹೇಮಾ ಮಾಲಿನಿ ಇಂದು (ಮಂಗಳವಾರ) ಹೇಳಿದ್ದಾರೆ.

ಅಲ್ಲದೆ ಕುಂಭಮೇಳದ ನಿರ್ವಹಣೆಯು ವ್ಯವಸ್ಥಿತವಾಗಿ ನಡೆಯುತ್ತಿದೆ ಎಂದು ಹೇಳಿದ್ದಾರೆ.

ಈ ಕುರಿತು ಸಂಸತ್ ಆವರಣದಲ್ಲಿ ಪ್ರತಿಕ್ರಿಯಿಸಿರುವ ಹೇಮಾ ಮಾಲಿನಿ, 'ನಾವು ಕೂಡ ಕುಂಭಕ್ಕೆ ಹೋಗಿದ್ದೇವೆ. ಪವಿತ್ರ ಸ್ನಾನವನ್ನು ಮಾಡಿದ್ದೇವೆ. ಎಲ್ಲವನ್ನೂ ಚೆನ್ನಾಗಿ ನಿರ್ವಹಿಸಲಾಗಿದೆ. ಕಾಲ್ತುಳಿತ ನಡೆದಿರುವುದು ನಿಜ. ಆದರೆ ದೊಡ್ಡ ಘಟನೆಯಲ್ಲ. ದೊಡ್ಡದಾಗಿ ಬಿಂಬಿಸಲಾಗುತ್ತಿದೆ. ಕುಂಭಮೇಳವನ್ನು ವ್ಯವಸ್ಥಿತವಾಗಿ ನಿರ್ವಹಿಸಲಾಗುತ್ತಿದೆ. ಎಲ್ಲವೂ ಚೆನ್ನಾಗಿ ನಡೆಯುತ್ತಿದೆ. ಭಾರಿ ಸಂಖ್ಯೆಯಲ್ಲಿ ಭಕ್ತರು ಸೇರುತ್ತಿದ್ದಾರೆ. ನಿರ್ವಹಣೆಯು ಕಷ್ಟಕರವಾದರೂ ನಮ್ಮಿಂದ ಸಾಧ್ಯವಾದಷ್ಟು ಮಾಡಲಾಗುತ್ತಿದೆ' ಎಂದು ಹೇಳಿದ್ದಾರೆ.

ಕುಂಭಮೇಳದಲ್ಲಿ ಮೃತಪಟ್ಟವರ ನಿಖರ ಅಂಕಿಯನ್ನು ಮುಚ್ಚಿಡಲಾಗುತ್ತಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿರುವ ಹೇಮಾ, 'ಇದು ಅವರ (ವಿಪಕ್ಷಗಳ) ಕೆಲಸ. ಅವರಿಗೆ ತೋಚಿದ್ದನ್ನು ಹೇಳುತ್ತಲೇ ಇರುತ್ತಾರೆ' ಎಂದು ಹೇಳಿದ್ದಾರೆ.

ಉತ್ತರ ಪ್ರದೇಶದ ಸರ್ಕಾರಿ ಮೂಲಗಳ ಪ್ರಕಾರ, ಜನವರಿ 29ರಂದು 'ಮೌನಿ ಅಮಾವಾಸ್ಯೆ'ಯಂದು ಪ್ರಯಾಗ್ರಾಜ್ನ ಸಂಗಮದಲ್ಲಿ ಅಮೃತ ಸ್ನಾನದ ವೇಳೆ ಉಂಟಾದ ಕಾಲ್ತುಳಿತದಲ್ಲಿ 30 ಭಕ್ತರು ಮೃತಪಟ್ಟು, 60ಕ್ಕೂ ಮಂದಿ ಗಾಯಗೊಂಡಿದ್ದರು.
.Kumbh Stampede ಡಿಜಿಟಲ್ ಕುಂಭದಲ್ಲಿ ಮೃತರ ಸಂಖ್ಯೆ ಮುಚ್ಚಿಹಾಕಲು ಯತ್ನ: ಅಖಿಲೇಶ್.Maha Kumbh Stampede | ಪಿತೂರಿ ಶಂಕೆ: 16 ಸಾವಿರ ಮೊಬೈಲ್ ಸಂಖ್ಯೆ ಪರಿಶೀಲನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.