ನವದೆಹಲಿ: ಭಾರತ ಮತ್ತು ಚೀನಾ ನಡುವಿನ ಲಡಾಖ್ ಬಿಕ್ಕಟ್ಟಿನ ಬಗ್ಗೆ ಲೋಕಸಭೆಯಲ್ಲಿ ವಿಪಕ್ಷ ನಾಯಕ ರಾಹುಲ್ ಗಾಂಧಿ ಪ್ರಸ್ತಾಪಿಸಿದ ನಂತರ ಸದನದಲ್ಲಿ ಗದ್ದಲ ಸೃಷ್ಟಿಯಾಯಿತು ಎಂದು ಮಾಧ್ಯಮಗಳು ವರದಿ ಮಾಡಿವೆ.

ರಾಷ್ಟ್ರಪತಿಗಳ ಭಾಷಣದ ವಂದನಾ ನಿರ್ಣಯದ ಮೇಲಿನ ಚರ್ಚೆಯ ವೇಳೆ ರಾಹುಲ್, ಮಾಜಿ ಸೇನಾ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ್ ನರವಾಣೆ ಅವರ ಅಪ್ರಕಟಿತ ಆತ್ಮಚರಿತ್ರೆಯಲ್ಲಿ ಉಲ್ಲೇಖಿಸಿದ ಭಾರತ–ಚೀನಾ ನಡುವಿನ ಲಡಾಖ್ ಬಿಕ್ಕಟ್ಟಿನ ವಿಚಾರವನ್ನು ಪ್ರಸ್ತಾಪಿಸಿದ್ದಾರೆ.
.ವಸತಿ ಯೋಜನೆಯಲ್ಲಿ ಅಕ್ರಮ: ಬಾಂಗ್ಲಾ ಮಾಜಿ ಪ್ರಧಾನಿ ಶೇಖ್ ಹಸೀನಾಗೆ 10 ವರ್ಷ ಜೈಲು.ಬಾಲ್ಯದ ಚಿತ್ರಗಳೊಂದಿಗೆ ಸಹೋದರಿ ಹುಟ್ಟುಹಬ್ಬಕ್ಕೆ ಶುಭ ಕೋರಿದ ನಟಿ ಶಿಲ್ಪಾ ಶೆಟ್ಟಿ.
ಇದಕ್ಕೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹಾಗೂ ಗೃಹ ಸಚಿವ ಅಮಿತ್ ಶಾ ಅವರು ವಿರೋಧ ವ್ಯಕ್ತಪಡಿಸಿದರು. ಪ್ರಕಟಿತವಲ್ಲದ ಪುಸ್ತಕವನ್ನು ಲೋಕಸಭೆಯಲ್ಲಿ ಚರ್ಚಿಸುವುದು ಸರಿಯಲ್ಲ ಎಂದು ವಿರೋಧ ವ್ಯಕ್ತಪಡಿಸಿದರು.

ನರವಾಣೆ ಅವರ ಆತ್ಮಚರಿತ್ರೆಯ ಕೆಲವು ಅಂಶಗಳನ್ನು ನಿಯತಕಾಲಿಕೆಯಲ್ಲಿ ಪ್ರಕಟಿಸಲಾಗಿದೆ ಎನ್ನಲಾಗಿದೆ. ಅಪ್ರಕಟಿತ ಪುಸ್ತಕದ ವಿಚಾರಗಳನ್ನು ಲೋಕಸಭೆಯಲ್ಲಿ ಚರ್ಚಿಸುವುದು ಸರಿಯಲ್ಲ. ಇದು ನಿಯಮಗಳ ಉಲ್ಲಂಘನೆಯಾಗುತ್ತದೆ. ಸಂಸದೀಯ ಸಂಪ್ರದಾಯಕ್ಕೆ ವಿರೋಧವಾಗಿದೆ. ನಿಯತಕಾಲಿಕೆಯಲ್ಲಿ ಏನೂ ಬೇಕಾದರೂ ಪ್ರಕಟಿಸಬಹುದು ಎಂದು ರಾಹುಲ್ ಹೇಳಿಕೆಗೆ ರಾಜನಾಥ್ ಸಿಂಗ್ ತಿರುಗೇಟು ನೀಡಿದ್ದಾರೆ. ಸಿಂಗ್ಗೆ ಅಮಿತ್ ಶಾ ಬೆಂಬಲ ವ್ಯಕ್ತಪಡಿಸಿದ್ದಾರೆ.
.ರಾಜ್.ಬಿ. ಶೆಟ್ಟಿ ನಟನೆಯ 'ರಕ್ಕಸಪುರದೋಳ್' ಫೆ. 6ರಂದು ತೆರೆಗೆ.ಕನಕೋತ್ಸವದಲ್ಲಿ ಚಂದನವದ ತಾರೆಯರ ಸಮಾಗಮ: ಚಿತ್ರಗಳು ಇಲ್ಲಿವೆ.
ಈ ವೇಳೆ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, ಸದನದಲ್ಲಿ ಲಡಾಖ್ ಬಿಕ್ಕಟ್ಟಿನ ಬಗ್ಗೆ ಚರ್ಚಿಸಲು ರಾಹುಲ್ಗೆ ಅವಕಾಶ ನೀಡಬೇಕೆಂದು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಮನವಿ ಮಾಡಿದ್ದಾರೆ.
.ಕನಕೋತ್ಸವದಲ್ಲಿ ಚಂದನವದ ತಾರೆಯರ ಸಮಾಗಮ: ಚಿತ್ರಗಳು ಇಲ್ಲಿವೆ.𝐎𝐓𝐓: ಪುನರ್ಜನ್ಮದ ಕತೆಯಿರುವ ಸಿಂಪಲ್ ಸುನಿ ನಿರ್ದೇಶನದ ‘ಗತವೈಭವ’ ಒಟಿಟಿಗೆ.𝐎𝐓𝐓: ಪುನರ್ಜನ್ಮದ ಕತೆಯಿರುವ ಸಿಂಪಲ್ ಸುನಿ ನಿರ್ದೇಶನದ ‘ಗತವೈಭವ’ ಒಟಿಟಿಗೆ.ಬಲೂಚಿಸ್ತಾನ: 40 ತಾಸು ಕಾರ್ಯಾಚರಣೆ; 145 ಉಗ್ರರು, 17 ಭದ್ರತಾ ಸಿಬ್ಬಂದಿ ಹತ್ಯೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.