ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಟಾರಿ ಗಡಿ: ₹2,700 ಕೋಟಿ ಮೌಲ್ಯದ ಹೆರಾಯಿನ್‌ ವಶ

Last Updated 30 ಜೂನ್ 2019, 19:25 IST
ಅಕ್ಷರ ಗಾತ್ರ

ಅಮೃತಸರ: ಅಟಾರಿ ಗಡಿ ಪ್ರದೇಶದ ಮೂಲಕ ಕಳ್ಳಸಾಗಣೆ ಮಾಡುತ್ತಿದ್ದ 532 ಕೆಜಿ ಹೆರಾಯಿನ್‌ ಅನ್ನು ಸುಂಕ ವಿಭಾಗವು ವಶಕ್ಕೆ ಪಡೆದಿದ್ದು, ಇದರ ಬೆಲೆ ₹2,700 ಕೋಟಿ ಎಂದು ಅಧಿಕಾರಿಗಳು ಹೇಳಿದ್ದಾರೆ.

ಹೆರಾಯಿನ್‌ ಮತ್ತು ಇತರ 52 ಕೆ.ಜಿ ಶಂಕಿತ ಮಾದಕ ದ್ರವ್ಯವನ್ನು ಮೂಟೆಗಳಲ್ಲಿ ತುಂಬಿ ಕಲ್ಲುಪ್ಪು ಸಾಗಿಸುವವಾಹನದಲ್ಲಿ ಸಾಗಿಸಲಾಗುತ್ತಿತ್ತು. ಪಾಕಿಸ್ತಾನದ ಅಟಾರಿ ಬಳಿ ವಾಹನ ಬಂದಾಗ ಚೆಕ್‌ಪೋಸ್ಟ್‌ ಬಳಿ ಈ ಮೂಟೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸುಂಕ ಆಯುಕ್ತ ದೀಪಕ್‌ ಕುಮಾರ್‌ ಗುಪ್ತ ಹೇಳಿದ್ದಾರೆ.

ಈ ಮೂಲಕಅಮೃತ್‌ಸರದ ಸುಂಕ (ತಡೆಗಟ್ಟುವಿಕೆ) ಆಯುಕ್ತಾಲಯ ಅಂತರರಾಷ್ಟ್ರೀಯ ಸಂಘಟಿತ ಮಾದಕ ದ್ರವ್ಯ ಕಳ್ಳಸಾಗಾಣಿಕೆ ಜಾಲ ಭೇದಿಸಿದಂತಾಗಿದೆ.

ಭಾರತೀಯ ಸುಂಕ ವಿಭಾಗದ ಇತಿಹಾಸದಲ್ಲಿಯೇ ಇಷ್ಟೊಂದು ಅಪಾರ ಪ್ರಮಾಣದ ಮಾದಕ ದ್ರವ್ಯ ಪತ್ತೆ ಮಾಡಲಾಗಿದೆ. ಶನಿವಾರ ರಾತ್ರಿ 1.30ರ ಸುಮಾರಿಗೆ ಕಲ್ಲುಪ್ಪು ಸಾಗಾಣಿಕೆಯ ವಾಹನವೊಂದರ ತಪಾಸಣೆ ಮಾಡುತ್ತಿದ್ದಾಗ, ಹೆರಾಯಿನ್‌ ಪತ್ತೆಯಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT