ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭಾ ಚುನಾವಣೆ 2024: ನೀವು ತಿಳಿದಿರಬೇಕಾದ ಅಂಕಿಅಂಶ

ಮಹತ್ವಪೂರ್ಣ ಅಂಕಿ-ಅಂಶಗಳ ಸಂಗ್ರಹ: 2024 ಲೋಕಸಭೆ ಚುನಾವಣೆ
Published 16 ಮಾರ್ಚ್ 2024, 11:24 IST
Last Updated 16 ಮಾರ್ಚ್ 2024, 11:24 IST
ಅಕ್ಷರ ಗಾತ್ರ

Lok Sabha Elections 2024: ಜಾಗತಿಕ ಕುತೂಹಲ ಕೆರಳಿಸಿರುವ 2024ರ ಭಾರತದ ಮಹಾ ಚುನಾವಣೆಯ ದಿನಾಂಕವನ್ನು ಭಾರತೀಯ ಚುನಾವಣಾ ಆಯೋಗವು ಇಂದು (16 ಮಾರ್ಚ್ 2024) ಘೋಷಣೆ ಮಾಡಿದೆ. ಇಂದಿನಿಂದಲೇ ನೀತಿ ಸಂಹಿತೆ ಜಾರಿಯಾಗುತ್ತಿದೆ. 2024 ಚುನಾವಣೆ ಯಾವಾಗ, ಎಷ್ಟು ಹಂತಗಳಲ್ಲಿ ಮತದಾನ ಆಗಲಿದೆ, 2024 ಲೋಕಸಭಾ ಚುನಾವಣೆಯ ಮತಎಣಿಕೆ/ಫಲಿತಾಂಶ ಯಾವಾಗ, ಲೋಕಸಭೆ ಚುನಾವಣೆ 2024ರಲ್ಲಿ ಎಷ್ಟು ಮತದಾರರ ಸಂಖ್ಯೆ ಎಷ್ಟು ಮುಂತಾಗಿ ಸಂಖ್ಯಾ ಆಧಾರಿತ ಸಮಗ್ರ ಮಾಹಿತಿ ಇಲ್ಲಿದೆ.

  • ಲೋಕಸಭೆ ಚುನಾವಣೆ 2024 ದಿನಾಂಕ: ದೇಶಾದ್ಯಂತ 2024 ಏಪ್ರಿಲ್ 19ರಿಂದ ಜೂನ್ 1ರವರೆಗೆ 7 ಹಂತಗಳಲ್ಲಿ ಚುನಾವಣೆ

  • ಕರ್ನಾಟಕದಲ್ಲಿ ಲೋಕಸಭಾ ಚುನಾವಣೆ ದಿನಾಂಕ: ಏಪ್ರಿಲ್ 26 ಶುಕ್ರವಾರ ಹಾಗೂ ಮೇ 7 ಮಂಗಳವಾರ, 2 ಹಂತಗಳಲ್ಲಿ - ತಲಾ 14 ಕ್ಷೇತ್ರಗಳಿಗೆ. ಮೇ 7ರಂದು ಸುರಪುರ ವಿಧಾನಸಭಾ ಕ್ಷೇತ್ರಕ್ಕೂ ಉಪಚುನಾವಣೆ

  • ಲೋಕಸಭೆ ಚುನಾವಣೆ 2024ರ ಮತ ಎಣಿಕೆ / ಫಲಿತಾಂಶದ ದಿನಾಂಕ: ಮಂಗಳವಾರ 04 ಜೂನ್ 2024

ದೇಶದ 543 ಕ್ಷೇತ್ರಗಳಿಗೆ 7 ಹಂತಗಳಲ್ಲಿ ಮತದಾನ
2024 ಏಪ್ರಿಲ್ 19, ಏಪ್ರಿಲ್ 26, ಮೇ 7, ಮೇ 13, ಮೇ 20, ಮೇ 25, ಜೂನ್ 1

ಯಾವೆಲ್ಲ ರಾಜ್ಯಗಳಲ್ಲಿ ಯಾವ ಹಂತದಲ್ಲಿ?

  1. ಲೋಕಸಭೆ ಚುನಾವಣೆ 2024 - 1ನೇ ಹಂತ ಏಪ್ರಿಲ್ 19: ಅರುಚಾಚಲ ಪ್ರದೇಶ, ಅಸ್ಸಾಂ, ಬಿಹಾರ, ಛತ್ತೀಸಗಢ, ಮಧ್ಯಪ್ರದೇಶ, ಮಹಾರಾಷ್ಟ್ರ, ಮಣಿಪುರ, ಮೇಘಾಲಯ, ಮಿಜೋರಂ, ನಾಗಾಲ್ಯಾಂಡ್, ರಾಜಸ್ಥಾನ, ಸಿಕ್ಕಿಂ, ತಮಿಳುನಾಡು, ತ್ರಿಪುರ, ಉತ್ತರ ಪ್ರದೇಶ, ಉತ್ತರಾಖಂಡ, ಪಶ್ಚಿಮ ಬಂಗಾಳ, ಅಂಡಮಾನ್-ನಿಕೋಬಾರ್, ಜಮ್ಮು ಮತ್ತು ಕಾಶ್ಮೀರ, ಲಕ್ಷದ್ವೀಪ, ಪುದುಚೇರಿ (ಒಟ್ಟು ಕ್ಷೇತ್ರಗಳು 102)

  2. ಲೋಕಸಭೆ ಚುನಾವಣೆ 2024 - 2ನೇ ಹಂತ ಏಪ್ರಿಲ್ 26: ಅಸ್ಸಾಂ, ಬಿಹಾರ, ಛತ್ತೀಸಗಢ, ಕರ್ನಾಟಕ, ಕೇರಳ, ಮಧ್ಯಪ್ರದೇಶ, ಮಹಾರಾಷ್ಟ್ರ, ಮಣಿಪುರ, ರಾಜಸ್ಥಾನ, ತ್ರಿಪುರ, ಉತ್ತರಪ್ರದೇಶ, ಪಶ್ಚಿಮ ಬಂಗಾಳ, ಜಮ್ಮು ಮತ್ತು ಕಾಶ್ಮೀರ (ಒಟ್ಟು ಕ್ಷೇತ್ರಗಳು 89)

  3. ಲೋಕಸಭೆ ಚುನಾವಣೆ 2024 - 3ನೇ ಹಂತ ಮೇ 07: ಅಸ್ಸಾಂ, ಬಿಹಾರ, ಛತ್ತೀಸಗಢ, ಗೋವಾ, ಗುಜರಾತ್, ಕರ್ನಾಟಕ, ಮಧ್ಯಪ್ರದೇಶ, ಮಹಾರಾಷ್ಟ್ರ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ದಾದ್ರಾ-ನಗರ ಹವೇಲಿ ಮತ್ತು ದಾಮನ್-ದಿಯು, ಜಮ್ಮು ಮತ್ತು ಕಾಶ್ಮೀರ (ಒಟ್ಟು ಕ್ಷೇತ್ರಗಳು 94)

  4. ಲೋಕಸಭೆ ಚುನಾವಣೆ 2024 - 4ನೇ ಹಂತ ಮೇ 13: ಆಂಧ್ರಪ್ರದೇಶ, ಬಿಹಾರ, ಜಾರ್ಖಂಡ್, ಮಧ್ಯಪ್ರದೇಶ, ಮಹಾರಾಷ್ಟ್ರ, ಒಡಿಶಾ, ತೆಲಂಗಾಣ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಜಮ್ಮು ಮತ್ತು ಕಾಶ್ಮೀರ (ಒಟ್ಟು ಕ್ಷೇತ್ರಗಳು 96)

  5. ಲೋಕಸಭೆ ಚುನಾವಣೆ 2024 - 5ನೇ ಹಂತ ಮೇ 20: ಬಿಹಾರ, ಜಾರ್ಖಂಡ್, ಮಹಾರಾಷ್ಟ್ರ, ಒಡಿಶಾ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಜಮ್ಮು ಮತ್ತು ಕಾಶ್ಮೀರ, ಲಡಾಖ್ (ಒಟ್ಟು ಕ್ಷೇತ್ರಗಳು 49)

  6. ಲೋಕಸಭೆ ಚುನಾವಣೆ 2024 - 6ನೇ ಹಂತ ಮೇ 25: ಬಿಹಾರ, ಹರಿಯಾಣ, ಜಾರ್ಖಂಡ್, ಒಡಿಶಾ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ದೆಹಲಿ (ಒಟ್ಟು ಕ್ಷೇತ್ರಗಳು 57)

  7. ಲೋಕಸಭೆ ಚುನಾವಣೆ 2024 - 7ನೇ ಹಂತ ಜೂನ್ 1: ಬಿಹಾರ, ಹಿಮಾಚಲ ಪ್ರದೇಶ, ಜಾರ್ಖಂಡ್, ಒಡಿಶಾ, ಪಂಜಾಬ್, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಚಂಡೀಗಢ (ಒಟ್ಟು ಕ್ಷೇತ್ರಗಳು 57)

ಮತದಾರರು

  • 96.88 ಕೋಟಿ ಭಾರತೀಯ ಮತದಾರರು

  • 49.72 ಕೋಟಿ ಪುರುಷರು, 47.15 ಕೋಟಿ ಮಹಿಳೆಯರು, 48 ಸಾವಿರ ಲಿಂಗತ್ವ ಅಲ್ಪಸಂಖ್ಯಾತರು

  • 1.84 ಕೋಟಿ ಮೊದಲ ಮತದಾರರು

  • 19.74 ಕೋಟಿ ಯುವ ಮತದಾರರು (ಏಪ್ರಿಲ್ 1ಕ್ಕೆ 18 ವರ್ಷ ತುಂಬುವವರ ಸಹಿತ)

  • 19.1 ಲಕ್ಷ ಸೇವಾ ವಲಯದ ಮತದಾರರು (ಸೇನಾ ಪಡೆಗಳು ಇತ್ಯಾದಿ)

  • 85 ವರ್ಷ ದಾಟಿದ ಮತದಾರರ ಸಂಖ್ಯೆ 82 ಲಕ್ಷ

  • 100 ವರ್ಷ ದಾಟಿದ (ಶತಾಯುಷಿ) ಮತದಾರರ ಸಂಖ್ಯೆ 2.18 ಲಕ್ಷ

  • 85 ವರ್ಷ ಮೇಲ್ಪಟ್ಟವರಿಗೆ ಹಾಗೂ ವಿಕಲ ಚೇತನರಿಗೆ ಮನೆಯಿಂದಲೇ ಮತದಾನದ ಅವಕಾಶ

  • 12 ರಾಜ್ಯಗಳಲ್ಲಿ ಪುರುಷ ಮತದಾರರಿಗಿಂತ ಮಹಿಳೆಯರ ಸಂಖ್ಯೆ ಹೆಚ್ಚು

ಚುನಾವಣಾ ಆಯೋಗದ ವ್ಯವಸ್ಥೆ

  • 1.5 ಚುನಾವಣಾ ಕೋಟಿ ಸಿಬ್ಬಂದಿ ನಿಯೋಜನೆ

  • 10.5 ಲಕ್ಷ ಮತಗಟ್ಟೆಗಳು

  • 55 ಲಕ್ಷ ಮತಯಂತ್ರಗಳು

  • 4 ಲಕ್ಷ ಚುನಾವಣಾ ವಾಹನಗಳ ಬಳಕೆ

ಗಮನಿಸಬೇಕಾದ ಅಂಶಗಳು

  • ಸೂರ್ಯಾಸ್ತದ ಬಳಿಕ ಬ್ಯಾಂಕ್ ಹಣದ (ಎಟಿಎಂ ಇತ್ಯಾದಿ) ವಾಹನ ಸಂಚಾರಕ್ಕೆ ನಿಷೇಧ

  • ಸೋಷಿಯಲ್ ಮೀಡಿಯಾ ಪೋಸ್ಟ್‌ಗಳ ಮೇಲೆ ಚುನಾವಣಾ ಆಯೋಗ ಕಣ್ಣು

  • ದ್ವೇಷ ಭಾಷಣ, ವೈಯಕ್ತಿಕ ಟೀಕೆ ಮಾಡುವಂತಿಲ್ಲ

  • ಮಕ್ಕಳನ್ನು ಚುನಾವಣಾ ಪ್ರಚಾರಕ್ಕೆ ಬಳಸುವಂತಿಲ್ಲ

  • ಮತದಾರರನ್ನು ಪ್ರಚೋದಿಸುವಂತಿಲ್ಲ

  • ಆ್ಯಪ್‌ಗಳ ಮೂಲಕ ಮತದಾನ ಕೇಂದ್ರಗಳ ಮಾಹಿತಿ

  • ಗಡಿ ಪ್ರದೇಶಗಳಲ್ಲಿ ನಿಗಾ ವಹಿಸಲು ಡ್ರೋಣ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT