ಲೋಕಸಭೆ ಕಲಾಪ ಸಂದರ್ಭದಲ್ಲಿ ವೀಕ್ಷಕರ ಗ್ಯಾಲರಿಯಿಂದ ಸಂಸದರ ಆಸನಗಳ ಮುಂಭಾಗದ ಮೇಜಿನ ಮೇಲೆ ಜಿಗಿದ ಇಬ್ಬರು ಅಪರಿಚಿತರು, ಹೊರಗೆ ಘೋಷಣೆ ಕೂಗಿದ ಇಬ್ಬರು ಸೇರಿ ಒಟ್ಟು ನಾಲ್ಕು ಜನರನ್ನು ಬಂಧಿಸಲಾಗಿದೆ. ಶೂನ್ಯ ವೇಳೆಯಲ್ಲಿ ವೀಕ್ಷಕರ ಗ್ಯಾಲರಿಯಲ್ಲಿದ್ದ ಇಬ್ಬರು ಅಪರಿಚಿತರು ಸದನದೊಳಗೆ ನುಗ್ಗಿದ್ದಾರೆ. ಜತೆಗೆ ಹಳದಿ ಬಣ್ಣದ ಹೊಗೆ ಸಿಂಪಡಿಸಿ, ’ಸರ್ವಾಧಿಕಾರ ನಡೆಯುವುದಿಲ್ಲ’ ಎಂದು ಘೋಷಣೆಯನ್ನೂ ಕೂಗಿದ್ದಾರೆ.