ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭದ್ರತಾ ಲೋಪ: ಬೆಂಗಳೂರಿನಲ್ಲೂ ಇದ್ದ ಸಾಗರ್‌, ಲಖನೌದಲ್ಲಿ ಇ–ರಿಕ್ಷಾ ಓಡಿಸುತ್ತಿದ್ದ

Published 13 ಡಿಸೆಂಬರ್ 2023, 14:22 IST
Last Updated 13 ಡಿಸೆಂಬರ್ 2023, 14:22 IST
ಅಕ್ಷರ ಗಾತ್ರ

ಲಖನೌ: ಸಂಸದ ಪ್ರತಾಪ್ ಸಿಂಹ ಅವರ ಶಿಫಾರಸಿನ ಮೇಲೆ ಲೋಕಸಭಾ ಕಲಾಪಕ್ಕೆ ಪಾಸ್ ಪಡೆದ ಸಾಗರ್‌ ಶರ್ಮಾ, ಕೆಲ ದಿನಗಳ ಹಿಂದೆ ಬೆಂಗಳೂರಿನಲ್ಲಿದ್ದ. ಇತ್ತೀಚೆಗೆ ಲಖನೌದಲ್ಲಿ ಇ–ರಿಕ್ಷಾ ಓಡಿಸುತ್ತಿದ್ದ ಎಂಬ ಅಂಶವನ್ನು ಆತನ ಸಹೋದರಿ ಹೇಳಿದ್ದಾರೆ.

ಲೋಕಸಭಾ ಕಲಾಪದಲ್ಲಿ ವೀಕ್ಷಕರ ಗ್ಯಾಲರಿಯಲ್ಲಿ ಮೈಸೂರಿನ ಮನೋರಂಜನ್ ಜತೆಗಿದ್ದ ಸಾಗರ್ ಶರ್ಮಾ, ಸದನದೊಳಗೆ ಬುಧವಾರ ನುಗ್ಗಿದ್ದರು. ಹಳದಿ ಬಣ್ಣದ ಹೊಗೆ ಸಿಂಪಡಿಸಿ, ಘೋಷಣೆಗಳನ್ನು ಕೂಗಿದರು. ನಂತರ ಸಂಸದರು ಹಾಗೂ ಭದ್ರತಾ ಸಿಬ್ಬಂದಿ ಕೈಗೆ ಸಿಕ್ಕಿಬಿದ್ದ ಈ ಇಬ್ಬರು ಸದ್ಯ ಪೊಲೀಸರ ಅತಿಥಿಗಳಾಗಿದ್ದಾರೆ.

ಉತ್ತರ ಪ್ರದೇಶದ ರಾಮನಗರದ ನಿವಾಸಿಯಾದ ಸಾಗರ್‌ (28) ಕುಟುಂಬ ಬಾಡಿಗೆ ಮನೆಯಲ್ಲಿ ನೆಲೆಸಿದ್ದಾರೆ. ತಂದೆ ರೋಶನ್ ಲಾಲ್ ಮರದ ಕೆಲಸ ಮಾಡಿ ಜೀವನ ನಡೆಸುತ್ತಿದ್ದಾರೆ. 

‘ಅಣ್ಣ ಮೊದಲು ಬೆಂಗಳೂರಿನಲ್ಲಿದ್ದ. ನಂತರ ಲಖನೌಗೆ ಮರಳಿ ಇ–ರಿಕ್ಷಾ ಓಡಿಸುತ್ತಿದ್ದಾನೆ. ‘ದೆಹಲಿಯಲ್ಲಿ ಒಂದು ಪ್ರತಿಭಟನೆ ಇದೆ. ಅದರಲ್ಲಿ ಪಾಲ್ಗೊಳ್ಳಬೇಕು’ ಎಂದು ಅಮ್ಮನಿಗೆ ಹೇಳುತ್ತಿದ್ದುದು ಗೊತ್ತು’ ಎಂದು ಸಾಗರ್ ಸೋದರಿ ಹೇಳಿದ್ದಾರೆ.

‘ಲೋಕಸಭೆಯಲ್ಲಿ ಬುಧವಾರ ನಡೆದ ಘಟನೆಯಲ್ಲಿ ಈತನ ಪಾತ್ರ ಇರುವ ಕುರಿತು ಯಾವುದೇ ಮಾಹಿತಿ ಸಾಗರ್ ಕುಟುಂಬಕ್ಕೆ ಇಲ್ಲ. ಹೀಗಿದ್ದರೂ ಎಲ್ಲ ಆಯಾಮಗಳಿಂದಲೂ ಮಾಹಿತಿ ಕಲೆ ಹಾಕಲಾಗುತ್ತಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಯಲ್ಲಿ ಸಾಗರ್‌ ಇದ್ದಾನೆ ಎಂದು ತಿಳಿಯುತ್ತಿದ್ದಂತೆ ಪೊಲೀಸರು ಹಾಗೂ ಮಾಧ್ಯಮದವರು ಆತನ ಮನೆಗೆ ಭೇಟಿ ನೀಡಿ ಮಾಹಿತಿ ಕಲೆ ಹಾಕುವ ಪ್ರಯತ್ನ ಮಾಡಿದರು.

ಯಾವುದೇ ಅಹಿತಕರ ಘಟನೆ ನಡೆಯದಂತೆ ಅವರ ಮನೆ ಎದುರು ಪೊಲೀಸ್‌ ಬಂದೋಬಸ್ತ್ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT