ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭಾ ಚುನಾವಣೆ: ಬಿಜೆಪಿ ಮೊದಲ ಪಟ್ಟಿಯಲ್ಲಿ ಸ್ಥಾನ ಪಡೆದ ಪ್ರಮುಖರು ಇವರು

ವಾರಾಣಸಿಯಿಂದ PM ನರೇಂದ್ರ ಮೋದಿ, ಗಾಂಧೀನಗರದಿಂದ ಗೃಹ ಸಚಿವ ಅಮಿತ್ ಶಾ, ಲಖನೌನಿಂದ ರಕ್ಷಣಾ ಸಚಿವ ರಾಜನಾಥ್ ಸಿಂಗ್‌ ಸ್ಪರ್ಧಿಸಲಿದ್ದಾರೆ.
Published 2 ಮಾರ್ಚ್ 2024, 14:15 IST
Last Updated 2 ಮಾರ್ಚ್ 2024, 14:51 IST
ಅಕ್ಷರ ಗಾತ್ರ

ನವದೆಹಲಿ: ಬರಲಿರುವ ಲೋಕಸಭಾ ಚುನಾವಣೆಗೆ ಭಾರತೀಯ ಜನತಾ ಪಕ್ಷವು 195 ಅಭ್ಯರ್ಥಿಗಳ ತನ್ನ ಮೊದಲ ಪಟ್ಟಿಯನ್ನು ಶನಿವಾರ ಬಿಡುಗಡೆ ಮಾಡಿದ್ದು, ಹಲವು ಹೊಸ ಮುಖಗಳಿಗೆ ಮತ್ತು ಯುವಕರಿಗೆ ಆದ್ಯತೆ ನೀಡಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ವಾರಾಣಸಿಯಿಂದ ಸ್ಪರ್ಧಿಸಲಿದ್ದಾರೆ.

ದಿ. ಸುಷ್ಮಾ ಸ್ವರಾಜ್ ಪುತ್ರಿ ಬಾನ್ಸುರಿ ಸ್ವರಾಜ್ ಅವರನ್ನು ನವದೆಹಲಿಯಿಂದ ಹಾಗೂ ಇತ್ತೀಚೆಗೆ ಬಿಜೆಪಿ ಸೇರಿದ ಕಾಂಗ್ರೆಸ್‌ ಮುಖಂಡ ಕೇರಳದ ದಿ. ಎ.ಕೆ.ಆ್ಯಂಟನಿ ಪುತ್ರ ಆನಿಲ್ ಕೆ. ಆ್ಯಂಟನಿ ಅವರನ್ನು ಪತ್ತನಮಿತ್ತಿಟ್ಟ ಕ್ಷೇತ್ರದಿಂದ ಬಿಜೆಪಿ ಕಣಕ್ಕಿಳಿಸುವುದಾಗಿ ಘೋಷಿಸಿದೆ. ಇದರಂತೆ ಟಿಕೆಟ್ ಪಡೆದ ಪಕ್ಷದ ಪ್ರಮುಖರ ಪಟ್ಟಿ ಇಂತಿದೆ.

ಆನಿಲ್ ಕೆ. ಆ್ಯಂಟನಿ ಮತ್ತು ಬಾನ್ಸುರಿ ಸ್ವರಾಜ್

ಆನಿಲ್ ಕೆ. ಆ್ಯಂಟನಿ ಮತ್ತು ಬಾನ್ಸುರಿ ಸ್ವರಾಜ್

 • ಪ್ರಧಾನಿ ನರೇಂದ್ರ ಮೋದಿ– ವಾರಾಣಸಿ

  • ರಕ್ಷಣಾ ಸಚಿವ ರಾಜನಾಥ್ ಸಿಂಗ್– ಲಖನೌ

  • ಗೃಹ ಸಚಿವ ಅಮಿತ್ ಶಾ– ಗಾಂಧೀನಗರ

  • ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾಧಿತ್ಯ ಸಿಂದಿಯಾ– ಗುನಾ

  • ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ– ಅಮೇಠಿ

  • ಲೋಕಸಭಾ ಸ್ಪೋಕರ್ ಓಂ ಬಿರ್ಲಾ– ಕೊಟಾ

  • ನಟಿ ಹೇಮಾ ಮಾಲಿನಿ– ಮಥುರಾ

  • ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚವ್ಹಾಣ್– ವಿಧಿಶಾ

  • ಪರಿಸರ ಖಾತೆ ಸಚಿವ ಭೂಪೇಂದ್ರ ಯಾದವ್– ಅಲ್ವಾರಾ

  •  ಕಿರೆಣ್ ರಿಜುಜು– ಅರುಣಾಚಲ ಪಶ್ಚಿಮ

  •  ಡಾ. ಜಿತೇಂದ್ರ ಸಿಂಗ್– ಉದಮ್‌ಪುರ್

  • ಎಲೆಕ್ಟ್ರಾನಿಕ್ಸ್, IT ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್– ತಿರುವನಂತಪುರ

ಕ್ಷೇತ್ರ ಕಳೆದುಕೊಂಡವರು

ಚಾಂದಿನಿ ಚೌಕ್‌ನ ಸಂಸದ ಹರ್ಷವರ್ಧನ್ ರಾಥೋಡ್

ನವದಹೆಲಿ ಸಂಸದೆ ಮೀನಾಕ್ಷಿ ಲೇಖಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT