ಲಖನೌ: ಅತಿದೊಡ್ಡ ಧಾರ್ಮಿಕ ಕಾರ್ಯಕ್ರಮ ಎಂದೇ ಖ್ಯಾತಿಯಾದ ಮಹಾಕುಂಭ ಮೇಳಕ್ಕೆ ನಾಳೆ ಮಹಾಶಿವರಾತ್ರಿಯಂದು ತೆರೆ ಬೀಳಲಿದೆ.

ನಾಳೆ (ಬುಧವಾರ) ಸಂಗಮದಲ್ಲಿ ಕೊನೆಯ ಅಮೃತ ಸ್ನಾನ ನಡೆಯಲಿದ್ದು, ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ.

ಮಹಾಶಿವರಾತ್ರಿಯಂದು ಲಕ್ಷಗಟ್ಟಲೆ ಭಕ್ತರು ಸಂಗಮದಲ್ಲಿ ಪುಣ್ಯ ಸ್ನಾನ ಮಾಡಲು ಬರುವ ನಿರೀಕ್ಷೆಯಿದೆ. ಈಗಾಗಲೇ ಸಾವಿರಾರು ಜನರು ಪ್ರಯಾಗ್ರಾಜ್ನತ್ತ ಬರುತ್ತಿದ್ದಾರೆ.
. ಮೌನಿ ಅಮಾವಾಸ್ಯೆ: ಅಯೋಧ್ಯೆ ರಾಮ ಮಂದಿರಕ್ಕೆ 72 ತಾಸುಗಳಲ್ಲಿ 50 ಲಕ್ಷ ಭಕ್ತರು.
ಹೊರರಾಜ್ಯಗಳಿಂದ ಭಕ್ತರನ್ನು ಕರೆತರುವ ವಾಹನಗಳಿಗೆ ಪ್ರಯಾಗ್ರಾಜ್ ನಗರಕ್ಕೆ ಬರದಂತೆ ನಿರ್ಬಂಧಿಸಲಾಗಿದ್ದು, ನಿಗದಿಪಡಿಸಿದ ಸ್ಥಳದಲ್ಲೇ ವಾಹನ ನಿಲ್ಲಿಸುವಂತೆ ಸೂಚಿಸಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಸಂಗಮದ ಹೊರತಾಗಿ ಘಾಟ್ಗಳಲ್ಲಿಯೂ ಸ್ನಾನ ಮಾಡಬಹುದು ಎಂದು ಅಧಿಕಾರಿಗಳು ಸಲಹೆ ನೀಡಿದ್ದಾರೆ.
.ಮಹಾಶಿವರಾತ್ರಿ: ಕಾಶಿ ವಿಶ್ವನಾಥ ದೇಗುಲದಲ್ಲಿ ಮೂರು ದಿನ ವಿಐಪಿ ದರ್ಶನ ರದ್ದು.
ಜನರ ನಿಯಂತ್ರಣ ಮತ್ತು ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆವಹಿಸಲು ಅಧಿಕಾರಿಗಳು ಸಿದ್ಧತೆ ನಡೆಸಿದ್ದು, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಪರಿಶೀಲನೆ ನಡೆಸಿದ್ದಾರೆ. ಪ್ರಯಾಗ್ರಾಜ್ನಲ್ಲಿ ಯಾವುದೇ ಟ್ರಾಫಿಕ್ ಜಾಮ್ ಆಗದಂತೆ ಮತ್ತು ಜನರಿಗೆ ಮೇಳಕ್ಕೆ ತಲುಪಲು ಸುಗಮವಾಗುವಂತೆ ಸಿದ್ಧತೆ ನಡೆಸಲು ಸಿಎಂ ಸೂಚನೆ ನೀಡಿದ್ದಾರೆ.
.ಮಹಾಕುಂಭ ಮೇಳ: 15,000 ಪೌರ ಕಾರ್ಮಿಕರಿಂದ ಸ್ವಚ್ಛತಾ ಅಭಿಯಾನ, ಗಿನ್ನೆಸ್ ದಾಖಲೆ?.ನಟ ಯಶ್ ಮಹಾಕುಂಭ ಮೇಳಕ್ಕೆ ತೆರಳಿದ್ದರೇ? ಫ್ಯಾಕ್ಟ್ ಚೆಕ್ ವೇಳೆ ಗೊತ್ತಾಗಿದ್ದು....

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.