ಪುರ್ಣಿಯಾ (ಬಿಹಾರ): ಬಿಹಾರದಲ್ಲಿ ಮಹಾಘಟಬಂಧನ ಮೈತ್ರಿಕೂಟವು ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ಮಾಡುವುದನ್ನು ಮುಂದುವರಿಸಲಿದೆ. ಅದಕ್ಕಾಗಿ ನಿತೀಶ್ ಕುಮಾರ್ ಅವರ ಅಗತ್ಯ ಇಲ್ಲ ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಹೇಳಿದ್ದಾರೆ.

ಇಲ್ಲಿ ನಡೆದ ಭಾರತ ಜೋಡೊ ನ್ಯಾಯ ಯಾತ್ರೆಯ ಸಮಾವೇಶದಲ್ಲಿ ಮಾತನಾಡಿದ ಅವರು, ‘ನಿತೀಶ್ ಕುಮಾರ್ ಅವರಿಗೆ ಒತ್ತಡವನ್ನು ನಿಭಾಯಿಸಿ ಗೊತ್ತಿಲ್ಲ. ತಕ್ಷಣವೇ ಅವರು ಯೂ–ಟರ್ನ್ ತೆಗೆದುಕೊಳ್ಳುತ್ತಾರೆ’ ಎಂದು ಹೇಳಿದ್ದಾರೆ.
.ಬಿಹಾರಕ್ಕೆ ಭಾರತ ಜೋಡೊ ನ್ಯಾಯ ಯಾತ್ರೆ: ನಿತೀಶ್, ಲಾಲುಗೆ ಆಹ್ವಾನ.
‘ದೇಶದ ಎಲ್ಲ ವಲಯಗಳಲ್ಲಿ ದಲಿತರು ಹಾಗೂ ಹಿಂದುಳಿದ ವರ್ಗದವರಿಗೆ ಸರಿಯಾದ ಪ್ರಾತಿನಿಧ್ಯ ಸಿಗುತ್ತಿಲ್ಲ. ದಲಿತ, ಹಿಂದುಳಿದ ವರ್ಗ, ಬುಡಕಟ್ಟು ಹಾಗೂ ಇನ್ನಿತರ ಸಮುದಾಯಗಳ ಜನಸಂಖ್ಯೆ ತಿಳಿದುಕೊಳ್ಳಲು ದೇಶದಲ್ಲಿ ಜಾತಿಗಣತಿ ನಡೆಸುವ ಅಗತ್ಯ ಇದೆ‘ ಎಂದು ಇಲ್ಲಿನ ರಂಗಭೂಮಿ ಮೈದಾನದಲ್ಲಿ ನಡೆದ ಸಮಾವೇಶದಲ್ಲಿ ಅವರು ಅಭಿಪ್ರಾಯಪಟ್ಟಿದ್ದಾರೆ.

ಮಣಿಪುರ ಹಿಂಸಾಚಾರದ ಬಗ್ಗೆ ಮಾತನಾಡಿದ ಅವರು, ‘ಅಲ್ಲಿ ನಾಗರಿಕ ಯುದ್ಧದ ಸನ್ನಿವೇಶ ಇದೆ. ಇನ್ನೂ ಅಲ್ಲಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿಲ್ಲ’ ಎಂದು ಕಿಡಿಕಾರಿದ್ದಾರೆ.
.ಒಂದು ಅವಕಾಶ ಕೊಡಿ: ಬಿಹಾರ ಜನರ ವಿಶ್ವಾಸ ಕೇಳಿದ ರಾಹುಲ್ ಗಾಂಧಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.