ಶನಿವಾರ, 2 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದು ಅವಕಾಶ ಕೊಡಿ: ಬಿಹಾರ ಜನರ ವಿಶ್ವಾಸ ಕೇಳಿದ ರಾಹುಲ್ ಗಾಂಧಿ

Published 30 ಜನವರಿ 2024, 11:30 IST
Last Updated 30 ಜನವರಿ 2024, 11:30 IST
ಅಕ್ಷರ ಗಾತ್ರ

ಪೂರ್ಣಿಯಾ: ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ರೈತರ ವಿಶ್ವಾಸ ಕಳೆದುಕೊಂಡಿದೆ, ಕಾಂಗ್ರೆಸ್‌ಗೆ ಮತಚಲಾಯಿಸಿ ಅಧಿಕಾರ ನೀಡಿದರೆ ಅದನ್ನು ಮತ್ತೆ ಗಳಿಸಲು ಪ್ರಯತ್ನಿಸುತ್ತೇವೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹೇಳಿದ್ದಾರೆ.  

ಬಿಹಾರದ ಪೂರ್ಣಿಯಾ ಜಿಲ್ಲೆಯಲ್ಲಿ ಭಾರತ್‌ ಜೋಡೊ ನ್ಯಾಯ ಯಾತ್ರೆಯ ರ್‍ಯಾಲಿಯಲ್ಲಿ ಜನರನ್ನು ಉದ್ದೇಶಿಸಿ ರಾಹುಲ್‌ ಗಾಂಧಿ ಮಾತನಾಡಿದ್ದಾರೆ.

‘ಮೋದಿ ಸರ್ಕಾರ ರೈತರ ಭಯವನ್ನು ಹೋಗಲಾಡಿಸಲು ಸೋತಿದೆ. ನಿಜ ಹೇಳಬೇಕೆಂದರೆ ರೈತರ ವಿಶ್ವಾಸವನ್ನೇ ಕಳೆದುಕೊಂಡಿದೆ. ಹೀಗಾಗಿ ನಿಮ್ಮಲ್ಲಿ ನಾನು ಮನವಿ ಮಾಡುತ್ತೇನೆ, ನಮಗೆ ಒಂದು ಅವಕಾಶ ಕೊಡಿ, ಆ ವಿಶ್ವಾಸವನ್ನು ಗಳಿಸಲು ಪ್ರಯತ್ನಿಸುತ್ತೇವೆ’ ಎಂದರು.

ಇದನ್ನು ಕೇಳಿ ಜನ ಚಪ್ಪಾಳೆ ತಟ್ಟುತ್ತಿದ್ದಂತೆ, ‘ಇದು ಕೇವಲ ಪೊಳ್ಳು ಭರವಸೆಯಲ್ಲ, ಈ ಹಿಂದಿನ ನಮ್ಮ ಕೆಲಸಗಳೇ ಇದಕ್ಕೆ ಸಾಕ್ಷಿ. ನಾವು ರೈತ ಸ್ನೇಹಿ ಭೂಸ್ವಾಧೀನ ಮಸೂದೆಯನ್ನು ತಂದಿದ್ದೇವೆ, ₹72,000 ಕೋಟಿ ಸಾಲಮನ್ನಾ ಮಾಡಿದ್ದೇವೆ.  ಛತ್ತೀಸ್‌ಗಢ ಮತ್ತು ರಾಜಸ್ಥಾನದಂತಹ ರಾಜ್ಯಗಳಲ್ಲಿ ರೈತರು ತಮ್ಮ ಉತ್ಪನ್ನಗಳನ್ನು ಉತ್ತಮ ಬೆಲೆಯಲ್ಲಿ ಮಾರಾಟ ಮಾಡಿ ಆದಾಯ ಗಳಿಸಿದ್ದಾರೆ’ ಎಂದು ಜನರನ್ನು ಉದ್ದೇಶಿಸಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT