ಬೆಂಗಳೂರು: ಕರ್ನಾಟಕ ಹಾಕಿ ಕ್ರೀಡೆಯ ವಲಯದಲ್ಲಿ ಚಿರಪರಿಚಿತ ತರಬೇತುದಾರರಾಗಿದ್ದ ಎ.ಇ. ಬ್ರಿಂಟ್ ಗುರುವಾರ ಬೆಳಿಗ್ಗೆ ಹೃದಯಸ್ತಂಭನದಿಂದ ನಿಧನರಾದರು.

1970–80ರ ಅವಧಿಯಲ್ಲಿ ಕರ್ನಾಟಕ ಹಾಕಿ ತಂಡದ ಪ್ರಮುಖ ಆಟಗಾರರಾಗಿದ್ದರು. ನಿವೃತ್ತಿಯ ನಂತರ ಅವರು ಭಾರತ ಜೂನಿಯರ್ ಪುರುಷರ ತಂಡ ಹಾಗೂ ಸೀನಿಯರ್ ಮಹಿಳಾ ತಂಡದ ಸಹಾಯಕ ಕೋಚ್ ಆಗಿ ಕಾರ್ಯನಿರ್ವಹಿಸಿದ್ದರು.

‘2001ರಲ್ಲಿ ಸಬ್ ಜೂನಿಯರ್ ಏಷ್ಯಾ ಕಪ್ ಗೆದ್ದ ಭಾರತ ತಂಡಕ್ಕೆ ಬ್ರಿಂಟ್ ಅವರು ಸಹಾಯಕ ಕೋಚ್ ಆಗಿದ್ದರು’ ಎಂದು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ತಿಳಿಸಿದೆ.

ರಾಷ್ಟ್ರೀಯ ತಂಡದಿಂದ ಮರಳಿದ ನಂತರ ಅವರು ಬೆಂಗಳೂರಿನಲ್ಲಿ ರಾಜ್ಯ ಆಟಗಾರರಿಗೆ ಮಾರ್ಗದರ್ಶನ ನೀಡಿದ್ದರು.

‘ಬ್ರಿಂಟ್ ಅವರಿಗೆ ಹಾಕಿ ಕ್ರೀಡೆಯೇ ಸರ್ವಸ್ವವಾಗಿತ್ತು. ಏನೇ ಆಗಲಿ ಪ್ರತಿದಿನ ಮುಂಜಾನೆ 5.30ಕ್ಕೆ ಶಾಂತಿನಗರದ ಹಾಕಿ ಕ್ರೀಡಾಂಗಣದಲ್ಲಿ ಹಾಜರಾಗಿರುತ್ತಿದ್ದರು. ಮಕ್ಕಳಿಗೆ ಹಾಕಿ ಆಟದ ಮಾರ್ಗದರ್ಶನ ನೀಡುತ್ತಿದ್ದರು’ ಎಂದು ಕೆಎಸ್ಎಚ್ಎ ಪದಾಧಿಕಾರಿ ಕೆ. ಕೃಷ್ಣಮೂರ್ತಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.