ಮುಂಬೈ: ಪತ್ರಿಕೆ, ಟಿ.ವಿ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಪ್ರಕಟವಾಗುವ ಸುದ್ದಿಗಳನ್ನು ಪರಿಶೀಲಿಸಲು ‘ಮಾಧ್ಯಮ ನಿಯಂತ್ರಣ ಕೇಂದ್ರ’ವನ್ನು ಸ್ಥಾಪಿಸಲು ಮಹಾರಾಷ್ಟ್ರ ಸರ್ಕಾರ ಮುಂದಾಗಿದ್ದು, ಇದಕ್ಕಾಗಿ ₹10 ಕೋಟಿ ಮೀಸಲಿಟ್ಟಿದೆ.
.ಮಹಾರಾಷ್ಟ್ರ | ಗಣಿಯಲ್ಲಿ ಅವಘಡ: ಇಬ್ಬರು ಕಾರ್ಮಿಕರ ಸಾವು .
ಈ ಕೇಂದ್ರವು ಮುದ್ರಣ ಮತ್ತು ಪ್ರಸಾರ ಮಾಧ್ಯಮಗಳಲ್ಲಿನ ಎಲ್ಲಾ ವಾಸ್ತವಿಕ ಮತ್ತು ದಾರಿತಪ್ಪಿಸುವ ಸುದ್ದಿ ವರದಿಗಳನ್ನು ಸಂಗ್ರಹಿಸಿ ವಿಶ್ಲೇಷಿಸುತ್ತದೆ. ಬಳಿಕ ವಾಸ್ತವಿಕ ವರದಿಯನ್ನು ಸಿದ್ಧಪಡಿಸಲಿದೆ ಎಂದು ಸರ್ಕಾರ ತಿಳಿಸಿದೆ.

ದಾರಿತಪ್ಪಿಸುವ ಸುದ್ದಿ ಇದ್ದರೆ, ಅದನ್ನು ನೈಜ ಸಮಯದಲ್ಲಿ ಸ್ಪಷ್ಟಪಡಿಸಲಾಗುತ್ತದೆ. ನಕಾರಾತ್ಮಕ ಸುದ್ದಿ ಇದ್ದರೆ, ಸ್ಪಷ್ಟೀಕರಣವನ್ನು ತ್ವರಿತವಾಗಿ ನೀಡಲಾಗುವುದು ಎಂದು ಅದು ಹೇಳಿದೆ.

ಪ್ರತಿದಿನ ಬೆಳಿಗ್ಗೆ 8 ರಿಂದ ರಾತ್ರಿ 10 ರವರೆಗೆ ಈ ಕೇಂದ್ರವು ಕಾರ್ಯ ನಿರ್ವಹಿಸಲಿದೆ. ಕೇಂದ್ರವನ್ನು ಸ್ಥಾಪಿಸಲು ಸರ್ಕಾರ ಆಡಳಿತಾತ್ಮಕ ಮತ್ತು ಆರ್ಥಿಕ ಅನುಮೋದನೆ ನೀಡಿದೆ.
.ಮಹಾರಾಷ್ಟ್ರ ಸರ್ಕಾರದ 500ಕ್ಕೂ ಹೆಚ್ಚು ಸೇವೆಗಳು ವ್ಯಾಟ್ಸ್ಆ್ಯಪ್ನಲ್ಲಿ ಲಭ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.