ಪುಣೆ: ಮುಂಬೈನಿಂದ ಹೈದರಾಬಾದ್‌ಗೆ ತೆರಳುತ್ತಿದ್ದ ಹೆಲಿಕಾಪ್ಟರ್, ಪುಣೆ ಜಿಲ್ಲೆಯ ಪೌದ್ ಗ್ರಾಮದ ಸಮೀಪ ಶನಿವಾರ ಪತನಗೊಂಡಿದೆ.
ಹೆಲಿಕಾಪ್ಟರ್ ಖಾಸಗಿ ವಿಮಾನಯಾನ ಸಂಸ್ಥೆಗೆ ಸೇರಿದ್ದಾಗಿದೆ ಎಂದು ಪುಣೆ ಗ್ರಾಮಾಂತರ ಎಸ್‌ಪಿ ಪಂಕಜ್ ದೇಶ್‌ಮುಖ್ ತಿಳಿಸಿರುವುದಾಗಿ 'ಎಎನ್‌ಐ' ವರದಿ ಮಾಡಿದೆ.
ಹೆಲಿಕಾಪ್ಟರ್‌ನಲ್ಲಿ ನಾಲ್ಕು ಮಂದಿ ಇದ್ದರು. ಕ್ಯಾಪ್ಟನ್ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದವರು ಸುರಕ್ಷಿತವಾಗಿದ್ದಾರೆ ಎಂದೂ ಪಂಕಜ್ ಹೇಳಿದ್ದಾರೆ.