ನಾಗ್ಪುರ: ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಭವಿಷ್ಯವಿಲ್ಲ. ಹೊಸದಾಗಿ ಚುನಾಯಿತರಾಗಿರುವ ಕಾಂಗ್ರೆಸ್ನ ಎಲ್ಲ 16 ಶಾಸಕರು ಕಮಲ ಪಕ್ಷಕ್ಕೆ ಸೇರ್ಪಡೆಯಾಗಬೇಕು ಎಂದು ಬಿಜೆಪಿ ನಾಯಕ ಅನಿಲ್ ದೇಶಮುಖ್ ಇಂದು (ಬುಧವಾರ) ಹೇಳಿದ್ದಾರೆ.

ಇತ್ತೀಚಿಗೆ ನಡೆದ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಮಹಾಯುತಿ ಮೈತ್ರಿಯು ಪ್ರಚಂಡ ಗೆಲುವು ಸಾಧಿಸಿತ್ತು. 288 ಸದಸ್ಯ ಬಲದ ಮಹಾರಾಷ್ಟ್ರದಲ್ಲಿ 230 ಸ್ಥಾನಗಳಲ್ಲಿ ಗೆದ್ದು ಅಧಿಕಾರ ಹಿಡಿದಿತ್ತು. ಮತ್ತೊಂದೆಡೆ ಮಹಾ ವಿಕಾಸ ಅಘಾಡಿ (ಎಂವಿಎ) ಕೇವಲ 46 ಸ್ಥಾನಗಳಲ್ಲಷ್ಟೇ ಜಯಿಸಿತ್ತು.

ಈ ಪೈಕಿ ಕಾಂಗ್ರೆಸ್ನ 16 ಅಭ್ಯರ್ಥಿಗಳು ಮಾತ್ರ ಜಯ ಸಾಧಿಸಿದ್ದರು.

'ಬಿಜೆಪಿ ಹಾಗೂ ಮಹಾಯುತಿ ಮೈತ್ರಿಯು ಭಾರಿ ಬಹುಮತ ಪಡೆದಿವೆ. ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿದೆ. ಎಲ್ಲೆಡೆ ಕಾಂಗ್ರೆಸ್ನ ಅವನತಿಯಾಗುತ್ತಿದೆ' ಎಂದು ಅವರು ಹೇಳಿದ್ದಾರೆ.

'ರಾಜ್ಯದಲ್ಲಿ ಕಾಂಗ್ರೆಸ್ಗೆ ಭವಿಷ್ಯವಿಲ್ಲ. ಅದರ ಶಾಸಕರು ಬಿಜೆಪಿಗೆ ಸೇರ್ಪಡೆಯಾಗಬೇಕು' ಎಂದು ಅವರು ಒತ್ತಾಯಿಸಿದರು.

'288 ಸದಸ್ಯ ಬಲದ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಕಾಂಗ್ರೆಸ್ 16 ಶಾಸಕರನ್ನು ಅಂದರೆ ಶೇ 5.55ರಷ್ಟು ಸ್ಥಾನಗಳನ್ನು ಮಾತ್ರ ಹೊಂದಿದೆ. ಇದು 1962ರ ಬಳಿಕ ರಾಜ್ಯ ವಿಧಾನಸಭೆಯಲ್ಲಿ ಕಾಂಗ್ರೆಸ್ನ ಕಳಪೆ ಸಾಧನೆಯಾಗಿದೆ' ಎಂದು ಅವರು ಉಲ್ಲೇಖಿಸಿದರು.

2014ರಿಂದ ಕಾಂಗ್ರೆಸ್ನ ಸೀಟು ಹಂಚಿಕೆ ಶೇ 20ಕ್ಕಿಂತ ಕಡಿಮೆಯಾಗಿದ್ದು, ಈಗ ಶೇ 10ಕ್ಕಿಂತಲೂ ಇಳಿಕೆಯಾಗಿದೆ ಎಂದು ಅವರು ಹೇಳಿದರು.

2023ರಲ್ಲಿ ಕಾಂಗ್ರೆಸ್ನಿಂದ ಉಚ್ಚಾಟನೆಗೊಂಡ ಬಳಿಕ ದೇಶಮುಖ್ ಬಿಜೆಪಿಗೆ ಸೇರ್ಪಡೆಯಾಗಿದ್ದರು.
.ಅನಿಲ್ ದೇಶಮುಖ್ ಮೇಲೆ ದಾಳಿ-ಹಲ್ಲೆ; ನಾಲ್ವರು ಅಪರಿಚಿತರ ಮೇಲೆ ಕೊಲೆ ಯತ್ನ ಪ್ರಕರಣ.ಮಹಾಯುತಿ ‘ಮಹಾ’ ದಿಗ್ವಿಜಯ: ಇಂಡಿಯಾ ಮೈತ್ರಿಗೆ ಜಾರ್ಖಂಡ್ ಗೆಲುವಿನ ಸಮಾಧಾನ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.