ನವದೆಹಲಿ: ಎದೆನೋವಿನಿಂದ ಬಳಲುತ್ತಿದ್ದ ಶಿವಸೇನಾದ ರಾಜ್ಯಸಭಾ ಸಂಸದ ಸಂಜಯ್ ರಾವುತ್ ಬುಧವಾರ ಮುಂಬೈನ ಲೀಲಾವತಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಮಹಾರಾಷ್ಟ್ರದ ವಿಧಾನಸಭೆ ಚುನಾವಣೆ ಫಲಿತಾಂಶ ಹೊರಬಿದ್ದಂದಿನಿಂದಲೂ ಸುದ್ದಿಯಲ್ಲಿದ್ದ ಸಂಜಯ್ ರಾವುತ್ಗೆ ಎದೆ ನೋವು ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ವೈದ್ಯರು ವಿಶ್ರಾಂತಿ ಪಡೆಯಲು ಸೂಚಿಸಿದ್ದಾರೆ.

ಕೆಲವು ದಿನಗಳಿಂದ ಎದೆ ನೋವು ಬರುತ್ತಿದ್ದಾಗಿ ಹೇಳಿದ್ದರು. ಇದರಿಂದಾಗಿ ತಪಾಸಣೆಗೆಂದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಒಂದೆರಡು ದಿನ ವಿಶ್ರಾಂತಿ ಪಡೆಯುವಂತೆ ವೈದ್ಯರು ಸೂಚಿಸಿದ್ದು, ನಾಳೆ ಆಸ್ಪತ್ರೆಯಿಂದ ಬಿಡುಗಡೆಯಾಗಲಿದ್ದಾರೆ. ಆತಂಕ ಪಡುವ ಅಗತ್ಯವಿಲ್ಲ ಎಂದು ಸಂಜಯ್ ರಾವುತ್ ಸೋದರ ಮತ್ತು ವಿಕ್ರೋಲಿ ಶಾಸಕ ಸುನಿಲ್ ರಾವುತ್ ತಿಳಿಸಿದ್ದಾರೆ.

ಇದನ್ನೂ ಓದಿ...

ಕಾಂಗ್ರೆಸ್ ಬೆಂಬಲದೊಂದಿಗೆ ಶಿವಸೇನಾ–ಎನ್ಸಿಪಿ ಮೈತ್ರಿ ಸರ್ಕಾರ ಸಾಧ್ಯತೆ

105 ಸಂಖ್ಯಾಬಲದ ಬಿಜೆಪಿ ಸರ್ಕಾರ ರಚನೆಯಿಂದ ಹಿಂದೆ ಸರಿದ ಬಳಿಕ 56 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಮೂಲಕ ಎರಡನೇ ಅತಿ ದೊಡ್ಡ ಪಕ್ಷವಾದ ಶಿವಸೇನಾಗೆ ರಾಜ್ಯಪಾಲರು ಸರ್ಕಾರ ರಚಿಸಲು ಆಹ್ವಾನ ನೀಡಿದ್ದಾರೆ. ಸರ್ಕಾರ ರಚನೆಯ ಹಕ್ಕು ಮಂಡನೆಗೆ ಭಾನುವಾರ 24 ಗಂಟೆಯ ಕಾಲಾವಾಕಾಶ ನೀಡಿದ್ದು, ಇಂದು ಸಂಜೆ 7.30ಕ್ಕೆ ಕಾಲಾವಧಿ ಮುಗಿಯಲಿದೆ.

ಕಾಂಗ್ರೆಸ್ನ ಬಾಹ್ಯ ಬೆಂಬಲದೊಂದಿಗೆ ಶರದ್ ಪವಾರ್ ನೇತೃತ್ವದ ಎನ್ಸಿಪಿಯೊಂದಿಗೆಸರ್ಕಾರ ರಚಿಸಲು ಶಿವಸೇನಾ ಕಸರತ್ತು ನಡೆಸುತ್ತಿದೆ ಎಂದು ಹೇಳಲಾಗುತ್ತಿದೆ.

ಇನ್ನಷ್ಟು...

'ಮಹಾ' ಸರ್ಕಾರ ಬಿಕ್ಕಟ್ಟು| ವಿರೋಧ ಪಕ್ಷದಲ್ಲಿ ಕೂರುವುದೇ ಸದ್ಯದ ತೀರ್ಮಾನ–ಖರ್ಗೆ

ಮಹಾರಾಷ್ಟ್ರ ಬಿಕ್ಕಟ್ಟು: ಎನ್ಡಿಎಯಿಂದ ಹೊರಬಂದ ಶಿವಸೇನೆ

ಬಿಜೆಪಿ - ಶಿವಸೇನಾ ಬೇಗುದಿ: ನೆನಪಾಗುತ್ತಿದ್ದಾರೆ ಮಹಾಜನ್, ಬಾಳ ಠಾಕ್ರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.