ಮಹುವಾ ಮೊಯಿತ್ರಾ ನಿವಾಸ, ಕಚೇರಿಗಳ ಮೇಲೆ ಸಿಬಿಐ ದಾಳಿ:
ಕಾಸಿಗಾಗಿ ಪ್ರಶ್ನೆ ಪ್ರಕರಣ ಸಂಬಂಧ ಮಾಜಿ ಸಂಸದೆ ಮಹುವಾ ಮೊಯಿತ್ರಾ ಅವರ ಕಚೇರಿ ಮತ್ತು ನಿವಾಸಗಳ ಮೇಲೆ ಸಿಬಿಐ ಅಧಿಕಾರಿಗಳು ಶನಿವಾರ (ಮಾರ್ಚ್ 23) ದಾಳಿ ಮಾಡಿದ್ದರು. ಈ ಪ್ರಕರಣ ಸಂಬಂಧ ಲೋಕಪಾಲ್ ನಿರ್ದೇಶನದ ಮೇಲೆ ಸಿಬಿಐ, ಮಹುವಾ ಮೊಯಿತ್ರಾ ವಿರುದ್ಧ ಶುಕ್ರವಾರ ಎಫ್‌ಐಆರ್ ದಾಖಲಿಸಿತ್ತು.
ಶನಿವಾರ ಬೆಳಗ್ಗೆ ಮಹುವಾ ಮೊಯಿತ್ರಾ ಅವರ ಕೋಲ್ಕತ್ತ ನಿವಾಸ, ಕಚೇರಿ ಸೇರಿದಂತೆ ದೆಹಲಿ ಕಚೇರಿಗಳ ಮೇಲೆಯೂ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದರು.
ಮಹುವಾ ಅವರು ಬಂಗಾಳದ ಕೃಷ್ಣನಗರ ಕ್ಷೇತ್ರದಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ.