ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲೇಷ್ಯಾ: ಭಾರತ, ಚೀನಾ ಪ್ರಜೆಗಳಿಗೆ ವೀಸಾಮುಕ್ತ ಪ್ರವೇಶ

Published 27 ನವೆಂಬರ್ 2023, 13:56 IST
Last Updated 27 ನವೆಂಬರ್ 2023, 13:56 IST
ಅಕ್ಷರ ಗಾತ್ರ

ಕ್ವಾಲಾಲಂಪುರ: ಭಾರತ ಮತ್ತು ಚೀನಾದ ಪ್ರಜೆಗಳಿಗೆ ಡಿಸೆಂಬರ್‌ 1ರಿಂದ 30 ದಿನಗಳವರೆಗೆ ವೀಸಾಮುಕ್ತ ಪ್ರವೇಶಕ್ಕೆ ಅನುಮತಿ ನೀಡುವುದಾಗಿ ಮಲೇಷ್ಯಾ ಪ್ರಧಾನಿ ಅನ್ವರ್‌ ಇಬ್ರಾಹಿಂ ಘೋಷಿಸಿದ್ದಾರೆ.

ಈಗಾಗಲೇ ಗಲ್ಫ್‌ ರಾಷ್ಟ್ರಗಳು, ಟರ್ಕಿ ಮತ್ತು ಜೋರ್ಡಾನ್‌ ಸೇರಿದಂತೆ ಇತರ ಪಶ್ಚಿಮ ಏಷ್ಯಾ ದೇಶಗಳು ಈ ವಿನಾಯಿತಿ ಪಡೆದಿವೆ ಎಂದು ಅವರು ತಿಳಿಸಿದರು.

ವೀಸಾ ವಿನಾಯಿತಿ ಘೋಷಿಸಿರುವುದರಿಂದ ಭದ್ರತಾ ಪರಿಶೀಲನೆಗೆ ಒಳಪಡಬೇಕಾಗುತ್ತದೆ. ಅಪರಾಧ ಹಿನ್ನೆಲೆ ಮತ್ತು ಭಯೋತ್ಪಾದನೆಯ ಅಪಾಯ ಇದ್ದಲ್ಲಿ ಅಂಥಹವರಿಗೆ ಪ್ರವೇಶ ನೀಡುವುದಿಲ್ಲ ಎಂದೂ ಅವರು ತಿಳಿಸಿದ್ದಾರೆ ಎಂದು ಬೆರ್ನಮಾ ನ್ಯೂಸ್‌ ಏಜನ್ಸಿ ವರದಿ ಮಾಡಿದೆ.

ಇತ್ತೀಚೆಗೆ ಥಾಯ್ಲೆಂಡ್‌ ಮತ್ತು ಶ್ರೀಲಂಕಾ ಸಹ  ಪ್ರವಾಸೋದ್ಯಮ ಉತ್ತೇಜನಕ್ಕೆ ಇದೇ ರೀತಿಯ ಕ್ರಮ ಅನುಸರಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT