ವ್ಯಕ್ತಿಗೆ ಬಾಟಲಿಯೊಂದನ್ನು ನೀಡಿ ಅದನ್ನು ಕುಡಿಯುವಂತೆ ಬಲವಂತ ಮಾಡುತ್ತಿರುವ ವಿಡಿಯೊ ಶನಿವಾರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. ತಕ್ಷಣವೇ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.
‘ಸೋಮವಾರ ರಾತ್ರಿ ವ್ಯಕ್ತಿಯೊಬ್ಬ ಮನೆಗೆ ನುಗ್ಗಿದ್ದಾನೆ. ಆ ವೇಳೆ ಮನೆಯಲ್ಲಿ ಇದ್ದವರು ಆತನನ್ನು ಹಿಡಿದು ಜಮೀನಿಗೆ ಕರೆದ್ಯೊಯ್ದು ಥಳಿಸಿದ್ದಾರೆ. ಬಳಿಕ ಬಾಟಲಿ ನೀಡಿ ಬಲವಂತವಾಗಿ ಮೂತ್ರ ಕುಡಿಸಿ ಹಿಂಸೆ ನೀಡಲಾಗಿದೆ’ ಎಂದು ಹೆಚ್ಚುವರಿ ಪೊಲೀಸ್ ಅಧೀಕ್ಷಕ ಜಸಾರಾಮ್ ಬೋಸ್ ತಿಳಿಸಿದ್ದಾರೆ.
ಪ್ರಕರಣ ಕುರಿತು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.