ಕೊಚ್ಚಿ: ‘ಲಗೇಜ್ನಲ್ಲಿ ಏನಿದೆ’ ಎಂದು ಕೇಳಿದ ವಿಮಾನ ನಿಲ್ದಾಣ ಸಿಬ್ಬಂದಿಗೆ, ‘ಬಾಂಬ್ ಇದೆ’ ಎಂದು ಉತ್ತರ ಕೊಟ್ಟ ವ್ಯಕ್ತಿ ಮತ್ತು ಅವರ ಪತ್ನಿಗೆ ಕೊಚ್ಚಿಯಲ್ಲಿ ವಿಮಾನ ಪ್ರವೇಶ ನಿರಾಕರಿಸಲಾಗಿದೆ. ಜತೆಗೆ, ಉಡಾಫೆ ಉತ್ತರ ನೀಡಿ ವಿಮಾನ ನಿಲ್ದಾಣದಲ್ಲಿ ಆತಂಕ ಸೃಷ್ಟಿಸಿದ್ದ ವ್ಯಕ್ತಿಯನ್ನು ಬಂಧಿಸಿ, ಸ್ಟೇಷನ್ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.