ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಣಿಪುರ: ‘ಸ್ಕೂಲ್‌ ಆನ್‌ ವ್ಹೀಲ್ಸ್‌’ಗೆ ಚಾಲನೆ

Published 5 ಮೇ 2024, 12:54 IST
Last Updated 5 ಮೇ 2024, 12:54 IST
ಅಕ್ಷರ ಗಾತ್ರ

ಇಂಫಾಲ್‌: ಮಣಿಪುರದಲ್ಲಿ ನಡೆಯುತ್ತಿರುವ ಸಂಘರ್ಷದಿಂದಾಗಿ ಪರಿಹಾರ ಶಿಬಿರಗಳಲ್ಲಿ ನೆಲೆಸಿರುವ ಮಕ್ಕಳಿಗಾಗಿ ‘ಸ್ಕೂಲ್‌ ಆನ್‌ ವ್ಹೀಲ್ಸ್‌’ ಕಾರ್ಯಕ್ರಮಕ್ಕೆ ರಾಜ್ಯಪಾಲೆ ಅನುಸೂಯ ಉಯಿಕೆ ಭಾನುವಾರ ಚಾಲನೆ ನೀಡಿದರು ಎಂದು ರಾಜಭವನ ತಿಳಿಸಿದೆ.

ಬಾಲ ವಿದ್ಯಾ ಮಂದಿರ ಸಂಕೀರ್ಣದಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ‘ಗ್ರಂಥಾಲಯ, ಸ್ಮಾರ್ಟ್‌ ಟಿ.ವಿ, ಕಂಪ್ಯೂಟರ್‌ ಮತ್ತು ಕ್ರೀಡಾ ಪರಿಕರಗಳನ್ನು ಒಳಗೊಂಡಿರುವ ಶಾಲಾ ಬಸ್‌, ಶಿಕ್ಷಕರೊಂದಿಗೆ ಪರಿಹಾರ ಶಿಬಿರಗಳಿಗೆ ತೆರಳಲಿದೆ’ ಎಂದು ಹೇಳಿದರು.

‘ರಾಜ್ಯದಲ್ಲಿ ಕಳೆದ ವರ್ಷ ಮೇ 3ರಿಂದ ಆರಂಭವಾದ ಜನಾಂಗೀಯ ಸಂಘರ್ಷದಿಂದ ಸಾವಿರಾರು ಜನರು ಅದರಲ್ಲೂ ವಿದ್ಯಾರ್ಥಿಗಳು ನಲುಗಿದ್ದಾರೆ. ಈ ಯೋಜನೆಯು ವಿದ್ಯಾರ್ಥಿಗಳನ್ನು ತಲುಪಿ ಅಗತ್ಯ ಶಿಕ್ಷಣ ನೀಡಲಿದೆ’ ಎಂದು ತಿಳಿಸಿದರು.

ಸ್ಥಳಾಂತರಗೊಂಡಿರುವ ಜನರಿಗೆ ಶಾಶ್ವತ ನೆಲೆ ಕಲ್ಪಿಸುವಂತೆ ಮುಖ್ಯಮಂತ್ರಿ ಮತ್ತು ಮುಖ್ಯ ಕಾರ್ಯದರ್ಶಿಗೆ ಸೂಚಿಸಿದ್ದೇನೆ ಎಂದು ಹೇಳಿದರು.

ರಾಜ್ಯದಲ್ಲಿ ಸುಮಾರು 18,000 ವಿದ್ಯಾರ್ಥಿಗಳು 480 ಪರಿಹಾರ ಶಿಬಿರಗಳಲ್ಲಿ ನೆಲೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT