ಗುರುವಾರ, 21 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ಪೊಕ್ಪಿಗೆ ಕುಕಿ ಕುಟುಂಬಗಳ ಸ್ಥಳಾಂತರ

Published 3 ಸೆಪ್ಟೆಂಬರ್ 2023, 14:05 IST
Last Updated 3 ಸೆಪ್ಟೆಂಬರ್ 2023, 14:05 IST
ಅಕ್ಷರ ಗಾತ್ರ

ಇಂಫಾಲ್: ನಾಲ್ಕು ತಿಂಗಳ ಹಿಂದೆ ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರ ಭುಗಿಲೆದ್ದ ನಂತರವೂ ಬೇರೆಡೆಗೆ ಸ್ಥಳಾಂತರಗೊಳ್ಳದ ಇಂಫಾಲ್‌ನ ನ್ಯೂ ಲಂಬುಲೇನ್ ಪ್ರದೇಶದಿಂದ 24 ಸದಸ್ಯರನ್ನು ಒಳಗೊಂಡ ಕೊನೆಯ 10 ಕುಕಿ ಕುಟುಂಬಗಳನ್ನು ಮಣಿಪುರ ಸರ್ಕಾರ ಸ್ಥಳಾಂತರಿಸಿದೆ.

ಈ ಕುಟುಂಬಗಳನ್ನು ಶನಿವಾರ ಮುಂಜಾನೆ ಇಂಫಾಲ್ ಕಣಿವೆಯ ಉತ್ತರ ಭಾಗದಲ್ಲಿರುವ ಕುಕಿ ಪ್ರಾಬಲ್ಯದ  ಕಾಂಗ್ಪೊಕ್ಪಿ ಜಿಲ್ಲೆಗೆ ಕರೆದೊಯ್ಯಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.  

ಆದರೆ, ನ್ಯೂ ‌ಲಂಬುಲೇನ್‌ ಪ್ರದೇಶದಲ್ಲಿನ ತಮ್ಮ ನಿವಾಸಗಳಿಂದ ಮೋಟ್‌ಬಂಗ್‌ಗೆ ಬಲವಂತವಾಗಿ ಹೊರಹಾಕಲಾಗಿದೆ ಎಂದು ಕುಕಿ ಕುಟುಂಬಗಳು ಆರೋಪಿಸಿವೆ. 

ಕುಕಿ ಪ್ರದೇಶ ಕಾವಲು ಕಾಯುತ್ತಿರುವ ಸ್ವಯಂಸೇವಕರಲ್ಲಿ ಒಬ್ಬರಾದ ಎಸ್ ಪ್ರಿಮ್ ವೈಫೇಯ್, ‘ಗೃಹ ಇಲಾಖೆ  ನಿರ್ದೇಶನದ ಮೇರೆಗೆ ಬಂದಿರುವುದಾಗಿ ಹೇಳಿದ ಸಶಸ್ತ್ರ ಸಿಬ್ಬಂದಿ ತಂಡವು ಸೆಪ್ಟೆಂಬರ್ 1 ರ ಮಧ್ಯರಾತ್ರಿ ಮತ್ತು  2ರಂದು ಇಂಫಾಲ್‌ನ ಕುಕಿ ಪ್ರದೇಶದ ಉಳಿದ ನಿವಾಸಿಗಳನ್ನು ಅವರ ಮನೆಗಳಿಂದ ಬಲವಂತವಾಗಿ ಹೊರಹಾಕಿತು. 24 ಮಂದಿಗೆ ನಮ್ಮ ವಸ್ತುಗಳನ್ನು ಪ್ಯಾಕ್ ಮಾಡಲು ಸಹ ಸಮಯ ನೀಡಲಿಲ್ಲ.  ಧರಿಸಿದ್ದ ಬಟ್ಟೆಗಳೊಂದಿಗೆ ನಮ್ಮನ್ನು ವಾಹನಗಳಿಗೆ ತಳ್ಳಲಾಯಿತು’ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

‘ಬಲವಂತದಿಂದ ಹೊರ ಹಾಕಿರುವುದರ’ ಬಗ್ಗೆ ಕುಕಿ ಬುಡಕಟ್ಟು ಸಮುದಾಯದ ಉನ್ನತ ಸಂಸ್ಥೆ ಕುಕಿ ಇನ್ಪಿ ಮಣಿಪುರ ತೀವ್ರ ಅಸಮಾಧಾನ ವ್ಯಕ್ತಪಡಿಸಿ, ಕುಕಿ ಸಮುದಾಯಕ್ಕೆ ಪ್ರತ್ಯೇಕ ಆಡಳಿತದ ಬೇಡಿಕೆಯನ್ನು ಪುನರುಚ್ಚರಿಸಿತು.

ಮೇ 3 ರಂದು ಜನಾಂಗೀಯ ಹಿಂಸಾಚಾರ ಆರಂಭವಾಗುತ್ತಿದ್ದಂತೆ ನ್ಯೂ ಲಂಬುಲೇನ್ ಪ್ರದೇಶದಲ್ಲಿ ವಾಸಿಸುತ್ತಿದ್ದ ಸುಮಾರು 300 ಆದಿವಾಸಿ ಕುಟುಂಬಗಳು ಸ್ಥಳಾಂತರಗೊಂಡವು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT