ಸೋಮವಾರ, 25 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಫಾಲ್‌: ಬಂದ್‌ಗೆ ಜನಜೀವನ ಅಸ್ತವ್ಯಸ್ತ

Published 19 ಸೆಪ್ಟೆಂಬರ್ 2023, 14:37 IST
Last Updated 19 ಸೆಪ್ಟೆಂಬರ್ 2023, 14:37 IST
ಅಕ್ಷರ ಗಾತ್ರ

ಗುವಾಹಟಿ: ಮೈತೇಯಿ ಸಮುದಾಯಕ್ಕೆ ಸೇರಿದ ಐವರು ಯುವಕರ ಬಂಧನ ಖಂಡಿಸಿ ಮಣಿಪುರದ ಮಹಿಳಾ ಸಂಘಟನೆಯಾದ ‘ಮೀರಾ ಪೈಬಿ’ ಸೇರಿದಂತೆ ಸ್ಥಳೀಯ ಸಂಘಟನೆಗಳು ಕರೆ ನೀಡಿರುವ 48 ಗಂಟೆಗಳ ಬಂದ್‌ನಿಂದಾಗಿ ಮಣಿಪುರದ ಇಂಫಾಲ್‌ ಕಣಿವೆಯ ಜಿಲ್ಲೆಗಳಲ್ಲಿ  ಮಂಗಳವಾರ ಜನಜೀವನ ಅಸ್ತವ್ಯಸ್ತಗೊಂಡಿತು.

ಮಹಿಳೆಯರು ಹಲವೆಡೆ ರಸ್ತೆ ಸಂಚಾರವನ್ನು ಬಂದ್‌ ಮಾಡಿದರು. ಬಲವಂತವಾಗಿ ಅಂಗಡಿಗಳನ್ನು ಮುಚ್ಚಿಸಿದರು. ಶಾಂತಿ ಭಂಗದಲ್ಲಿ ತೊಡಗಿದ ಗುಂಪುಗಳನ್ನು ಚದುರಿಸಲು ಪೊಲೀಸರು ಟಿಯರ್‌ ಗ್ಯಾಸ್‌ ಶೆಲ್‌ಗಳನ್ನು ಸಿಡಿಸಿದರು. ಮುಂಜಾಗ್ರತೆಯಾಗಿ ಇಂಫಾಲ್‌ ಸೇರಿದಂತೆ ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪೊಲೀಸ್‌ ಬಿಗಿ ಭದ್ರತೆಯನ್ನು ಹೆಚ್ಚಿಸಲಾಗಿದೆ.

ಮಂಗಳವಾರ ಮತ್ತು ಬುಧವಾರ ನಡೆಯಬೇಕಿದ್ದ 10ನೇ ತರಗತಿಯ ಪೂರಕ ಪರೀಕ್ಷೆಯನ್ನು ಮುಂದೂಡಲಾಗಿದೆ.

‘ಬಂಧಿತ ಯುವಕರು ಶಸ್ತ್ರಸಜ್ಜಿತ ದುಷ್ಕರ್ಮಿಗಳ ಗುಂಪಿಗೆ ಸೇರಿದವರಲ್ಲ. ಕುಕಿ ಸಮುದಾಯಕ್ಕೆ ಸೇರಿದ ನಾರ್ಕೊ ಟೆರರಿಸ್ಟ್‌ಗಳ ದಾಳಿಯಿಂದ ತಮ್ಮ ಗ್ರಾಮಗಳನ್ನು ರಕ್ಷಿಸಿಕೊಳ್ಳುವ ಸ್ವಯಂ ಸೇವಕರಾಗಿದ್ದಾರೆ. ಹಾಗಾಗಿ, ಅವರನ್ನು ಬಿಡುಗಡೆಗೊಳಿಸಬೇಕು’ ಎಂದು ಮೈತೇಯಿ ಪ್ರತಿಭಟನಕಾರರು ಆಗ್ರಹಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಕುಕಿ ಗುಂಪುಗಳು, ‘ಶಸ್ತ್ರಸಜ್ಜಿತ ಈ ದುಷ್ಕರ್ಮಿಗಳು ಪೊಲೀಸರು ಹಾಗೂ ಮೈತೇಯಿ ಪೈಬಿ ನೆರವಿನೊಂದಿಗೆ ಕುಕಿ ಜನರ ಮೇಲೆ ದಾಳಿ ನಡೆಸುತ್ತಿದ್ದಾರೆ’ ಎಂದು ಆಪಾದಿಸಿದ್ದಾರೆ.

ಪೊಲೀಸರ ಸೋಗಿನಲ್ಲಿ ಶಸ್ತ್ರ ಸಾಗಣೆ:

ಯುವಕರು ಪೊಲೀಸರ ಸೋಗಿನಲ್ಲಿ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಸಾಗಿಸುತ್ತಿದ್ದ ವೇಳೆ ಸೆಪ್ಟೆಂಬರ್‌ 16ರಂದು ಪೊಲೀಸರು ಬಂಧಿಸಿದ್ದಾರೆ.‌ ನ್ಯಾಯಾಲಯಕ್ಕೆ ಆರೋಪಿಗಳನ್ನು ಹಾಜರುಪಡಿಸಿದ್ದು, ಹೆಚ್ಚಿನ ವಿಚಾರಣೆಗಾಗಿ ವಶಕ್ಕೆ ಪಡೆದಿದ್ದಾರೆ.

ಮಣಿಪುರದಲ್ಲಿ ಹಿಂಸಾಚಾರದಿಂದ ಇಲ್ಲಿಯವರೆಗೆ 175 ಜನರು ಮೃತಪಟ್ಟಿದ್ದು, 60 ಸಾವಿರ ಜನರು ನಿರಾಶ್ರಿತರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT