ನವದೆಹಲಿ:ಆಯುಧಗಳು ಮತ್ತು ಹಿಂಸೆ ಯಾವುದಕ್ಕೂ ಪರಿಹಾರವಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಗಣರಾಜ್ಯೋತ್ಸವ ದಿನದಂದೇ2020ರ ಮೊದಲ ಮನದ ಮಾತು (ಮನ್ ಕಿ ಬಾತ್) ರೇಡಿಯೊ ಕಾರ್ಯಕ್ರಮದಲ್ಲಿ ದೇಶದ ಜನರನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಶಾಂತಿಯುತ ಮಾತುಕತೆಯಿಂದಾಗಿ ಈಶಾನ್ಯ ರಾಜ್ಯಗಳಲ್ಲಿ ಬಂಡಾಯ ಕಡಿಮೆಯಾಗಿದೆ’ ಎಂದರು.

‘ಈಶಾನ್ಯದಲ್ಲಿ ಈಗ ಬಂಡಾಯ ಕಡಿಮೆಯಾಗಿದೆ. ಆ ಪ್ರದೇಶದ ಎಲ್ಲ ಸಮಸ್ಯೆಗಳನ್ನು ಶಾಂತಿಯುತ ಮಾತುಕತೆಗಳ ಮೂಲಕ ಪರಿಹರಿಸಲಾಗುತ್ತಿರುವುದೂ ಇದಕ್ಕೆ ಕಾರಣ’ ಎಂದು ಪ್ರಧಾನಿ ಹೇಳಿದರು.

ಹಿಂಸೆ ಹಾಗೂ ಆಯುಧಗಳ ಮೂಲಕ ಪರಿಹಾರ ಕಂಡುಕೊಳ್ಳಲು ಯತ್ನಿಸುವವರು ಮುಖ್ಯವಾಹಿನಿಗೆ ಬರಬೇಕು ಎಂದೂ ಅವರು ಕರೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.