ರಾಂಚಿ: ಜಾರ್ಖಂಡ್ನ ಜೆಮ್ಶೆಡ್ಪುರದಲ್ಲಿರುವ ಮೃಗಾಲಯದಲ್ಲಿ ಮಾರಣಾಂತಿಕ ಬ್ಯಾಕ್ಟೀರಿಯಾ ಸೋಂಕಿನಿಂದ 10 ಕೃಷ್ಣಮೃಗಗಳು ಮೃತಪಟ್ಟಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜೆಮ್ಶೆಡ್ಪುರದಲ್ಲಿರುವ ಟಾಟಾ ಸ್ಟೀಲ್ ಜೈವಿಕ ಉದ್ಯಾನದಲ್ಲಿ ಡಿಸೆಂಬರ್ 1ರಿಂದ 6ರವರೆಗೆ 10 ಕೃಷ್ಣಮೃಗಗಳು ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ.

‘ಉದ್ಯಾನವನದಲ್ಲಿ ಇದುವರೆಗೆ 10 ಕೃಷ್ಣಮೃಗಗಳು ಸಾವಿಗೀಡಾಗಿವೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ರಾಂಚಿ ಪಶುವೈದ್ಯಕೀಯ ಕಾಲೇಜಿಗೆ ಕಳುಹಿಸಲಾಗಿದೆ. ಬ್ಯಾಕ್ಟೀರಿಯಾ ಸೋಂಕಿನಿಂದಾಗಿ ಕೃಷ್ಣಮೃಗಗಳು ಮೃತಪಟ್ಟಿರುವ ಸಾಧ್ಯತೆ ಇದೆ’ ಎಂದು ಉದ್ಯಾನವನದ ಉಪನಿರ್ದೇಶಕ ಡಾ. ನಯೀಮ್ ಅಖ್ತರ್ ತಿಳಿಸಿದ್ದಾರೆ.

‘ಕೃಷ್ಣಮೃಗಗಳ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಅವುಗಳಿಗೆ ‘ಹೆಮರೇಜ್ ಸೆಪ್ಟೆಸೀಮಿಯಾ’ ಹೆಸರಿನ ಬ್ಯಾಕ್ಟೀರಿಯಾ ಸೋಂಕು ತಗುಲಿರುವುದು ದೃಢಪಟ್ಟಿದೆ’ ಎಂದು ರಾಂಚಿಯ ಪಶುವೈದ್ಯಕೀಯ ಕಾಲೇಜಿನ (ಆರ್ವಿಸಿ) ರೋಗಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ಪ್ರಜ್ಞಾ ಲಕ್ರಾ ತಿಳಿಸಿದ್ದಾರೆ.

ಟಾಟಾ ಸ್ಟೀಲ್ ಜೈವಿಕ ಉದ್ಯಾನದಲ್ಲಿ 18 ಕೃಷ್ಣಮೃಗಗಳು ಸೇರಿದಂತೆ ವಿವಿಧ ಜಾತಿಯ 370 ಪ್ರಾಣಿಗಳಿದ್ದವು. ಸೋಂಕಿನಿಂದಾಗಿ 10 ಕೃಷ್ಣಮೃಗಗಳು ಮೃತಪಟ್ಟಿದ್ದು, ಇನ್ನುಳಿದ 8 ಕೃಷ್ಣಮೃಗಗಳು ಸುರಕ್ಷಿತವಾಗಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ನವೆಂಬರ್ನಲ್ಲಿ ಕರ್ನಾಟಕದ ಬೆಳಗಾವಿ ಜಿಲ್ಲೆಯ ಭೂತರಾಮನ ಹಟ್ಟಿಯಲ್ಲಿರುವ ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿನ 31 ಕೃಷ್ಣಮೃಗಗಳು ಸಾವಿಗೀಡಾಗಿದ್ದವು.

ಮೃಗಾಲಯದಲ್ಲಿ ಒಟ್ಟು 38 ಕೃಷ್ಣಮೃಗಗಳಿದ್ದು, ಅವುಗಳ ಪೈಕಿ 31 ಮೃತಪಟ್ಟಿದ್ದವು. ಮಾರಣಾಂತಿಕ ಬ್ಯಾಕ್ಟೀರಿಯಾ ಸೋಂಕು ಈ ದುರಂತಕ್ಕೆ ಕಾರಣವಾಗಿರಬಹುದು ಎಂದು ಶಂಕಿಸಲಾಗಿತ್ತು. ‘ಹೆಮರೇಜ್ ಸೆಪ್ಟೆಸೀಮಿಯಾ’ ಹೆಸರಿನ ಈ ಸೋಂಕು ಪ್ರಾಣಿಗಳಲ್ಲಿ ಆಂತರಿಕ ರಕ್ತಸ್ರಾವಕ್ಕೆ ಕಾರಣವಾಗುವುದರ ಜೊತೆಗೆ ಅಂಗಾಂಗಗಳನ್ನು ತೀವ್ರವಾಗಿ ಗಾಸಿಗೊಳಿಸುತ್ತದೆ. ಸೋಂಕು ಉಂಟಾದ 24 ಗಂಟೆಗಳಲ್ಲೇ ಪ್ರಾಣಿಗಳು ಜೀವ ಕಳೆದುಕೊಳ್ಳುವ ಸಾಧ್ಯತೆಯಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.