ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಮ್ಮು ಮತ್ತು ಕಾಶ್ಮೀರದ ಸೋನ್‌ಮಾರ್ಗ್‌ನಲ್ಲಿ ಭಾರಿ ಹಿಮಕುಸಿತ

Published 29 ಮಾರ್ಚ್ 2024, 11:49 IST
Last Updated 29 ಮಾರ್ಚ್ 2024, 11:49 IST
ಅಕ್ಷರ ಗಾತ್ರ

ಶ್ರೀನಗರ: ದಕ್ಷಿಣ ಕಾಶ್ಶೀರದ ಗಂಡೆರ್‌ಬಾಲ್ ಜಲ್ಲೆಯ ಸೋನ್‌ಮಾರ್ಗ್ ಗಿರಿಧಾಮದಲ್ಲಿ ಶುಕ್ರವಾರ ಭಾರಿ ಹಿಮಕುಸಿತ ಉಂಟಾಗಿದೆ. ಇದರಿಂದ ಹಿಮದಡಿ ಪ್ರವಾಸಿಗರು ಸಿಲುಕಿಕೊಂಡಿದ್ದು, ಅವರನ್ನು ಅಧಿಕಾರಿಗಳು ರಕ್ಷಣೆ ಮಾಡಿದ್ದಾರೆ.

ಹಿಮಕುಸಿತದಿಂದಾಗಿ ಹಲವು ವಾಹನಗಳು ಹಿಮದಡಿ ಸಿಲುಕಿವೆ. ಪೊಲೀಸರು, ರಾಜ್ಯ ವಿಪತ್ತು ನಿರ್ವಹಣಾ ತಂಡ, ಸ್ಥಳೀಯರು ಹಾಗೂ ಇನ್ನಿತರ ಸಂಸ್ಥೆಗಳು ಸೇರಿ ರಕ್ಷಣಾ ಕಾರ್ಯಾಚರಣೆ ನಡೆಸಿವೆ.

ಹಿಮದಡಿ ಇನ್ನಷ್ಟು ಪ್ರವಾಸಿಗರು ಸಿಲುಕಿದ್ದಾರೆಯೇ ಎಂದು ಶೋಧ ನಡೆಸಲಾಗುತ್ತಿದೆ. ಹವಾಮಾನ ಸರಿಯಾಗುವವರೆಗೂ ಹಿಮಕುಸಿತ ಉಂಟಾದ ಪ್ರದೇಶಗಳಿಗೆ ತೆರಳಬೇಡಿ. ಎಚ್ಚರಿಕೆ ವಹಿಸಿ ಎಂದು ಅಧಿಕಾರಿಗಳು ಜನರಲ್ಲಿ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT