ಪೊಲೀಸರು ಅಳವಡಿಸಿದ್ದ ಬ್ಯಾರಿಕೇಡ್‌ಗಳ ಕಾರಣದಿಂದ ದೆಹಲಿ–ನೊಯಿಡಾ ಗಡಿಯಲ್ಲಿ ಸೋಮವಾರ ತೀವ್ರ ದಟ್ಟಣೆ ಉಂಟಾಗಿತ್ತು –ಪಿಟಿಐ ಚಿತ್ರ
ಗಡಿ ಭಾಗದಲ್ಲಿ ತಪಾಸಣೆಯನ್ನು ಬಿಗಿಗೊಳಿಸಲಾಗಿದೆ. ಡ್ರೋನ್ ಮೂಲಕ ಕಣ್ಗಾವಲು ಇರಿಸಲಾಗಿದೆ. ಗಲಭೆ ತಡೆ ಉಪಕರಣವನ್ನೂ ಅಳವಡಿಕೆ ಮಾಡಿಕೊಳ್ಳಲಾಗಿದೆ
ಸಾಗರ್ ಕಲ್ಸಿ ಹೆಚ್ಚುವರಿ ಪೊಲೀಸ್ ಆಯುತ್ತ (ಪೂರ್ವ)
ಸಂಸತ್ತು ಅಧಿವೇಶನ ನಡೆಯುತ್ತಿರುವುದರಿಂದ ದೆಹಲಿಯಾದ್ಯಂತ ಸೆಕ್ಷನ್ 163 ಜಾರಿಯಲ್ಲಿದೆ. ಅನುಮತಿ ಇಲ್ಲದ ಪ್ರತಿಭಟನೆಗಳಿಗೆ ಅವಕಾಶವಿಲ್ಲ. ಇದಕ್ಕಾಗಿಯೇ ಬಿಗಿ ಕಣ್ಗಾವಲು ಏರ್ಪಡಿಸಲಾಗಿದೆ
ಎಸ್.ಕೆ. ಜೈನ್ ಜಂಟಿ ಪೊಲೀಸ್ ಆಯುಕ್ತ
ಪ್ರತಿಭಟನೆಯನ್ನು ತಡೆಯಲು ಮೋರ್ಚಾದ ಜಿಲ್ಲಾಧ್ಯಕ್ಷ ಗಂಗೇಶ್ವರ್ ದತ್ತ ಶರ್ಮಾ ಅವರನ್ನು ಬಂಧಿಸಲಾಗಿದೆ. ಬೇಡಿಕೆ ಈಡೇರುವವರೆಗೂ ಹೋರಾಟ ಮುಂದುವರಿಯುತ್ತದೆ
ಶಶಿಕಾಂತ್ ಸಂಯುಕ್ತ ಕಿಸಾನ್ ಮೋರ್ಚಾದ ರಾಷ್ಟ್ರೀಯ ಕಾರ್ಯಕಾರಿಣಿಯ ಸದಸ್ಯ