ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಾಂಗ್ರೆಸ್‌, ಎಸ್‌ಪಿಗಳೊಂದಿಗೆ ಮೈತ್ರಿ ಇಲ್ಲ: ಮಾಯಾವತಿ

ಎರಡೂ ಪಕ್ಷಗಳೂ ಮೀಸಲಾತಿ ವಿರೋಧಿಗಳೆಂದು ಕಿಡಿ
Published : 25 ಆಗಸ್ಟ್ 2024, 15:41 IST
Last Updated : 25 ಆಗಸ್ಟ್ 2024, 15:41 IST
ಫಾಲೋ ಮಾಡಿ
Comments

ಲಖನೌ: ಕಾಂಗ್ರೆಸ್‌ ಮತ್ತು ಸಮಾಜವಾದಿ (ಎಸ್‌ಪಿ) ಪಕ್ಷಗಳೆರಡೂ ‘ಮೀಸಲಾತಿ ವಿರೋಧಿ’ ಪಕ್ಷಳಾಗಿದ್ದು, ಭವಿಷ್ಯದಲ್ಲಿ ಇವುಗಳೊಂದಿಗೆ ಯಾವುದೇ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಬಹುಜನ ಸಮಾಜವಾದಿ ಪಕ್ಷದ (ಬಿಎಸ್‌ಪಿ) ಮುಖ್ಯಸ್ಥೆ ಮಾಯಾವತಿ ಕಿಡಿಕಾರಿದ್ದಾರೆ. 

ಸಾಮಾಜಿಕ ಜಾಲತಾಣ ‘ಎಕ್ಸ್‌’ ಖಾತೆಯಲ್ಲಿ ಪೋಸ್ಟ್ ಮಾಡಿರುವ ಮಾಯಾವತಿ ‘ಈಗ ಜಾತಿಗಣತಿ ನಡೆಸುವಂತೆ ಆಗ್ರಹಿಸುತ್ತಿರುವ ಕಾಂಗ್ರೆಸ್‌, ತಾನು ಅಧಿಕಾರದಲ್ಲಿದ್ದಾಗ ಏಕೆ ಗಣತಿ ನಡೆಸಲಿಲ್ಲ? ಕಾಂಗ್ರೆಸ್‌ಗೆ ಅಂಬೇಡ್ಕರ್‌ ಅವರ ಬಗ್ಗೆ ಗೌರವವಿಲ್ಲ. ಅವರಿಗೆ ಪಕ್ಷವು ‘ಭಾರತ ರತ್ನ’ ಪುರಸ್ಕಾರವನ್ನೂ ನೀಡಿಲ್ಲ. ಅಂಬೇಡ್ಕರ್‌ ಅವರ ಅನುಯಾಯಿಗಳು ಕಾಂಗ್ರೆಸ್‌ ಅನ್ನು ಎಂದಿಗೂ ಕ್ಷಮಿಸುವುದಿಲ್ಲ ’ ಎಂದರು.

ಅಲ್ಲದೇ ‘ಕಾಂಗ್ರೆಸ್‌ ಮತ್ತು ಎಸ್‌ಪಿ ಮೀಸಲಾತಿ ವಿರೋಧಿಗಳು. ಅವರಿಗೆ ಎಂದಿಗೂ ಮೀಸಲಾತಿ ಬೇಕಿರಲಿಲ್ಲ. ದಲಿತರ ಮೇಲಿನ ಅವರ ಪ್ರೀತಿ ಕೇವಲ ಒಂದು ನೆಪವಷ್ಟೆ. ಬಿಎಸ್‌ಪಿ ಸಂಸ್ಥಾಪಕ ಕನ್ಶಿರಾಮ್‌ ನಿಧನರಾದಾಗ ಕಾಂಗ್ರೆಸ್‌ ಸರ್ಕಾರ ರಾಜ್ಯದಲ್ಲಿ ಶೋಕಾಚರಣೆಯನ್ನು ಘೋಷಿಸಲಿಲ್ಲ. ಆ ಪಕ್ಷದ ದ್ವಂದ್ವ ನೀತಿ ಏನೆಂದು ಜನರಿಗೆ ತಿಳಿದಿದೆ’ ಎಂದು ಬರೆದುಕೊಂಡಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT