ಲಖನೌ: ಮುಜಾಫರ್‌ನಗರದಲ್ಲಿ ಭಾನುವಾರ ನಡೆದ ಬೃಹತ್ ರೈತ ಮಹಾ ಪಂಚಾಯಿತಿಯಲ್ಲಿ ಹಿಂದೂ–ಮುಸ್ಲಿಂ ಏಕತೆಗಾಗಿ ಘೋಷಣೆಗಳನ್ನು ಹಾಕಿರುವುದನ್ನು ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿ ಸ್ವಾಗತಿಸಿದ್ದಾರೆ.

ಇದರಿಂದ, 2013ರಲ್ಲಿ ಈ ಜಿಲ್ಲೆಯಲ್ಲಿ ಸಂಭವಿಸಿದ ಹಿಂಸಾಚಾರದ ಕಹಿ ಘಟನೆಯನ್ನು ಮರೆಯಲು ಸಾಧ್ಯವಾಗಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಕೆಲವರಿಗೆ ಇಂತಹ ಘೋಷಣೆಗಳನ್ನು ಸಹಿಸಿಕೊಳ್ಳಲು ಸಾಧ್ಯವಾಗದೆಯೇ ಇರಬಹುದು. ಆದರೆ, ರೈತರ ಸಮಾವೇಶದ ಮೂಲಕವೂ ಕೋಮು ಸೌಹಾರ್ದತೆ ಮೂಡಿಸುವ ಪ್ರಯತ್ನಗಳನ್ನು ಕೈಗೊಳ್ಳಲಾಗಿದೆ. ಇದರಿಂದ, ಬಿಜೆಪಿಯು ದ್ವೇಷದ ಮೂಲಕ ಬಿತ್ತಿರುವ ರಾಜಕೀಯ ನೆಲೆ ಅಳಿಯಲಿದೆ ಎಂದು ಹೇಳಿದ್ದಾರೆ.

2013ರಲ್ಲಿ ಮುಜಫ್ಫರನಗರದಲ್ಲಿ ಸಂಭವಿಸಿದ ಹಿಂಸಾಚಾರದಲ್ಲಿ 63 ಮಂದಿ ಸಾವಿಗೀಡಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.