ನವದೆಹಲಿ: ‘ಮೇಡೇ, ಮೇಡೇ, ಮೇಡೇ’... ಇದು ವಿಮಾನ ದುರಂತಕ್ಕೆ ಈಡಾಗುವುದಕ್ಕೂ ಮುನ್ನ ಪೈಲಟ್ ಕಳುಹಿಸಿದ್ದ ತುರ್ತು ಸಮಸ್ಯೆಯ ಸಂದೇಶ.

ಅಹಮದಾಬಾದ್ನಿಂದ ಲಂಡನ್ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನದ ಪೈಲಟ್ ರವಾನಿಸಿದ ಈ ಸಂದೇಶವನ್ನು ಕೆಲವೇ ಸೆಕೆಂಡುಗಳಲ್ಲಿ ವಿಮಾನ ಸಂಚಾರ ನಿಯಂತ್ರಕರು (ಎಟಿಸಿ) ಸ್ವೀಕರಿಸಿದರು. ಆದರೆ ಪೈಲಟ್ಗಳಾದ ಕ್ಯಾಪ್ಟನ್ ಸುಮಿತ್ ಸಭರ್ವಾಲ್ ಮತ್ತು ಸಹ ಪೈಲಟ್ ಕ್ಲೈವ್ ಕುಂದರ್ ಅವರನ್ನು ಸಂಪರ್ಕಿಸಲು ಎಟಿಸಿ ನಡೆಸಿದ ಪ್ರಯತ್ನ ವಿಫಲವಾಯಿತು. ಕೆಲ ಕ್ಷಣದಲ್ಲಿಯೇ ವಿಮಾನವು ಪತನಗೊಂಡಿತು.

‘ಮೇಡೇ’ ಕರೆಯು ಜಾಗತಿಕವಾಗಿ ಬಳಸುವ ಪ್ರಮಾಣಿತ ಶಿಷ್ಟಾಚಾರವಾಗಿದೆ. ಇದನ್ನು 1920ರ ದಶಕದಲ್ಲಿ ಪರಿಚಯಿಸಲಾಯಿತು. ಇದು ಫ್ರೆಂಚ್ನ ‘ಮೈಡರ್‘ ಪದದಿಂದ ಬಂದಿದೆ. ಅಂದರೆ ‘ಸಹಾಯ ಮಾಡಿ’ ಎಂದರ್ಥ. ಇದನ್ನು ಸತತವಾಗಿ ಮೂರು ಬಾರಿ ‘ಮೇಡೇ, ಮೇಡೇ, ಮೇಡೇ’ ಎಂದು ಹೇಳಬೇಕಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.