ನವದೆಹಲಿ(ಪಿಟಿಐ): ರಾಮನವಮಿ ಸಮಯದಲ್ಲಿ ಆಚರಿಸುವ ದುರ್ಗಾದೇವಿ ಆರಾಧನೆಯ ವೇಳೆ (ದೆಹಲಿ ಭಾಗದಲ್ಲಿ ನವರಾತ್ರಿ ಎಂದು ಖ್ಯಾತ) ವೇಳೆ ಮಾಂಸದ ಅಂಗಡಿಗಳನ್ನು ತೆರೆಯಬಾರದು ಎಂದು ನಿರ್ದೇಶಿಸಿದ ದಕ್ಷಿಣ ದೆಹಲಿಯ ಮೇಯರ್ ಕ್ರಮವನ್ನು ದೆಹಲಿಯ ಬಿಜೆಪಿ ಸಂಸದ ಪರ್ವೇಶ್ ಸಾಹಿಬ್ ಸಿಂಗ್ ವರ್ಮಾ ಅವರು ಸಮರ್ಥಿಸಿಕೊಂಡಿದ್ದಾರೆ.